ಮದುವೆ ಸಮಾರಂಭದಲ್ಲಿ ಯುವಕನ ಮರ್ಮಾಂಗವನ್ನ ಕತ್ತರಿಸಿಹಾಕಿದ ತೃತೀಯಲಿಂಗಿಗಳು
ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದುವೆ ಸಮಾರಂಭದಲ್ಲಿ ನೃತ್ಯ ಮಾಡಲು ಹೋದ 24 ವರ್ಷದ ಯುವಕನ ಮರ್ಮಾಂಗವನ್ನ ತೃತೀಯ ಲಿಂಗಿಯರು ಕತ್ತರಿಸಿಹಾಕಿರುವ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.
ಯುವಕನು ಆರೋಪಿಗಳ ಜೊತೆಗೆ ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡಲು ಹೋಗಿದ್ದ ವೇಳೆ ಇಂತಹ ಕೃತ್ಯವೆಸಗಲಾಗಿದ್ದು, ಈ ಸಂಬಂಧ ಸಂತ್ರಸ್ತನ ಸೋದರಿ ದೆಹಲಿ ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತ ಯುವಕನನ್ನ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿಲಾಗಿದ್ದು, ಆತ ಆರೋಪಿಗಳನ್ನ ಗುಡ್ಡಿ ಮತ್ತು ರಜ್ಜಿ ಎಂದು ಹೆಸರಿಸಿದ್ದಾನೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.