ದುಷ್ಕರ್ಮಿಗಳು ಅಮೆರಿಕದಲ್ಲಿ ಮತ್ತೆ ಗುಂಡಿನ ಮಳೆಗೈದಿದ್ದಾರೆ. 11 ಮಕ್ಕಳ ಮೇಲೆ ಗುಂಡು ಹಾರಿಸಿದ್ದು, ಓರ್ವ ಮಗು ಸಾವನ್ನಪ್ಪಿದೆ. ಓರ್ವ ವ್ಯಕ್ತಿ ಗಂಭೀರವಾಗಿದ್ದಾರೆ.
ಭಾನುವಾರ ಅಮೆರಿಕದಲ್ಲಿ ಫ್ಯಾಮಿಲಿ ಟುಗೆದರ್ ಕಾರ್ಯಕ್ರಮ ನಡೆದಿತ್ತು. ಈ ವೇಳೆಯೇ ದುಷ್ಕರ್ಮಿಗಳು ಮಕ್ಕಳ ಮೇಲೆ ಗುಂಡು ಹಾರಿಸಿದ್ದಾರೆ. 8 ವರ್ಷದ ಬಾಲಕಿ ತಲೆಗೆ ಗುಂಡು ತಗುಲಿ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಇನ್ನುಳಿದ 10 ಮಕ್ಕಳ ಸ್ಥಿತಿ ಕೂಂಡ ಗಂಭೀರವಾಗಿದೆ. ಸುಮಾರು 36 ವರ್ಷದ ವ್ಯಕ್ತಿಯೊಬ್ಬರು ಕೂಡ ಗುಂಡಿನ ದಾಳಿಯಲ್ಲಿ ಗಂಭೀರವಾಗಿದ್ದಾರೆ.
ಒಂದು ವರ್ಷದ ಬಾಲಕ ಮತ್ತು ಎಂಟು ವರ್ಷದ ಬಾಲಕನಿಗೆ ಹಲವು ಬಾರಿ ಗುಂಡು ತಗುಲಿದ್ದು ಅವರಿಬ್ಬರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಎಲ್ಲ ಮಕ್ಕಳನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.