ಗೆಳತಿ ಹುಟ್ಟುಹಬ್ಬಕ್ಕೆ ಬುರ್ಜ್ ಕಟ್ಟಡದಲ್ಲಿ ವೀಡಿಯೋ ಶುಭಾಶಯ ಕೋರಿದ ರೊನಾಲ್ಡೊ…
ವಿಶ್ವದ ಅಗ್ರಗಣ್ಯ ಮತ್ತು ಶ್ರೀಮಂತ ಪುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ತನ್ನ ಗೆಳತಿಯ ಹುಟ್ಟು ಹಬ್ಬಕ್ಕಾಗಿ ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿದಲ್ಲಿ ಲೇಸರ್ ಶೋ ಏರ್ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರ 28 ನೇ ಹುಟ್ಟಹಬ್ಬವನ್ನ ಸ್ಮರಣೀಯವಾಗಿಸಲು ರೊನಾಲ್ಡೊ ಸುಮಾರು 50,000 ಪೌಂಡ್ ಗಳನ್ನ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. Cristiano Ronaldo spends 50,000 pounds to light up Burj Khalifa on girlfriend’s birthday
ದುಬೈ ನ ಬುರ್ಜ್ ಕಟ್ಟಡದಲ್ಲಿ ಲೇಸರ್ ಶೋಗಾಗಿ ಗೆಳತಿ ರೋಡ್ರಿಗಸ್ ನೆಟ್ ಫ್ಲಿಕ್ಸ್ ಸರಣಿ ಐ ಆಮ್ ಜಾರ್ಜಿನಾ ವೆಬ್ ಸರಣಿಯ ತುಣುಕುಗಳನ್ನ ಬಳಸಿಕೊಳ್ಳಲಾಗಿದೆ. ಕೆಲವೇ ಕ್ಷಣಗಲ ವೀಡೋದ ಕೊನೆಯಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ಜಿಯೋ ಎಂಬ ಸಂದೇಶವನ್ನ ಒಳಗೊಂಡಿದೆ.
ಕ್ರಿಸ್ಚಿಯಾನೋ ರೊನಾಲ್ಡೊ ಈ ವೀಡಿಯೋವನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..