ಗರ್ಭಿಣಿಯರು ಕೆಲಸಕ್ಕೆ ಬೇಡವೆಂದ SBI – ಮಹಿಳಾ ಅಯೋಗದಿಂದ ನೋಟಿಸ್
ಮೂರು ತಿಂಗಳು ಮೆಲ್ಪಟ್ಟ ಗರ್ಭಿಣಿಯರು ಬ್ಯಾಂಕ್ ಸೇವೆಗೆ ಸೇರಲು ಅನರ್ಹರು ಎಂಬ ಎಸ್ ಬಿ ಐ ಬ್ಯಾಂಕ್ ನ ನಿಯಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೆಹಲಿ ಮಹಿಳಾ ಆಯೋಗ ಸ್ಟೇಟ್ ಬ್ಯಾಂಕ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ.
‘Discriminatory’: SBI rebuked for calling pregnant women ‘unfit’ in new rules
ಮೂರು ತಿಂಗಳು ಮೇಲ್ಪಟ್ಟ ಸೇವೆಗೆ ಸೇರಲು ಅನರ್ಹ ಎಂಬ ಮಾರ್ಗಸೂಚಿ ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕಾನೂನುಬಾಹಿರವಾಗಿದೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ. ಮಹಿಳಾ ವಿರೋಧಿ ನೀತಿಯನ್ನ ಹಿಂಪಡೆಯುವಂತೆ ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ 31 ರಂದು ಎಸ್ ಬಿ ಐ ಈ ಸುತ್ತೋಲೆ ಹೊರಡಿಸಿತ್ತು. ಬ್ಯಾಂಕಿನ ನಿಯಮ ಸಾಮಾಜಿಕ ಭದ್ರತೆ ಸಂಹಿತೆ 2020 ರ ನಿಯಮಕ್ಕೆ ವಿರೋಧವಾಗಿದೆ ಎಂದು ಮಹಿಳಾ ಆಯೋಗ ಅಭಿಪ್ರಾಯ ಪಟ್ಟಿದೆ.