ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಕಿಡಿ ಕಾರಿದ ಜುವೆಂಟಸ್ ತಂಡದ ಕೋಚ್
ಪೋರ್ಚ್‍ಗಲ್‍ನ ಹೀರೋ, ಜುವೆಂಟಸ್‍ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೊಗೆ ಪಂದ್ಯದ ತೀಕ್ಷಣತೆಯೇ ಅರ್ಥವಾಗುತ್ತಿಲ್ಲ. ಕ್ರಿಸ್ಟಿಯಾನೋ ರೋನಾಲ್ಡೊ ಅವರ ಆಟದ ವೈಖರಿಗೆ ತಂಡದ ಜುವೆಂಟಸ್ ತಂಡದ ಕೋಚ್ ಮೌರಿಝೋ ಸಾರ್ರಿ ಅವರು ಕಿಡಿ ಕಾರಿದ್ದಾರೆ.
ಕೋಪಾ ಇಟಾಲಿಯಾ ಫುಟ್‍ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜುವೆಂಟಸ್ ತಂಡ ನಾಪೋಲಿ ತಂಡದ ವಿರುದ್ಧ ಸೋಲು ಅನುಭವಿಸಿತ್ತು. ಆದ್ರೆ ಈ ಸೋಲನ್ನು ಜುವೆಂಟಸ್ ತಂಡದ ಮ್ಯಾನೇಜರ್‍ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕ್ರಿಸ್ಟಿಯಾನೋ ರೋನಾಲ್ಡೊ ಅವರು ತಮ್ಮ ನೈಜ ಆಟವನ್ನಾಡಲಿಲಿಲ್ಲ ಪಂದ್ಯದ ತೀವ್ರತೆಯನ್ನು ಅರಿತುಕೊಳ್ಳಲು ಅವರು ವಿಫರಾಗಿದ್ದಾರೆ ಎಂದು ಮೌರಿಝೋ ಸಾರ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿದ್ದಾಜಿದ್ದಿನಿಂದ ಸಾಗಿದ್ದ ಈ ಫೈನಲ್ ಪಂದ್ಯದಲ್ಲಿ ಜುವೆಂಟಸ್ ಮತ್ತು ನಾಪೋಲಿ ತಂಡಗಳು ಸಮಬಲದ ಪ್ರದರ್ಶನವನ್ನೇ ನೀಡಿದ್ದವು. ಆದ್ರೆ ನಿಗದಿತ ಸಮಯದಲ್ಲಿ ಉಭಯ ತಂಡಗಳು ಯಾವುದೇ ಗೋಲುಗಳನ್ನು ದಾಖಲಿಸಿಲ್ಲ. ಹೀಗಾಗಿ ಹೆಚ್ಚುವರಿ ಸಮಯದ ಆಟವನ್ನು ನೀಡಲಿಲ್ಲ. ಅಂತಿಮವಾಗಿ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ನಿರ್ಧರಿಸಲಾಯ್ತು. ಪೆನಾಲ್ಟಿ ಶೂಟೌಟ್‍ನಲ್ಲಿ ನಾಪೋಲಿ ತಂಡ 4-2ರಿಂದ ಗೆದ್ದುಕೊಂಡು ಆರನೇ ಬಾರಿ ಕೋಪಾ ಇಟಲಿಯಾ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ನಾನು ಪಂದ್ಯದ ಬಳಿಕ ಆಟಗಾರರಿಗೆ ಏನನ್ನು ಹೇಳಲಿಲ್ಲ. ಯಾಕಂದ್ರೆ ನನ್ನಂತೆ ಅವರು ಕೂಡ ನಿರಾಸೆ, ಬೇಸರದಿಂದ ಇದ್ರು. ಆದ್ರೆ ಆಟಗಾರರು ಆಡಿದ ರೀತಿಯನ್ನು ನೋಡಿದಾಗ ಸಿಟ್ಟು ಬಂದಿತ್ತು. ಕೋವಿಡ್-19ನಿಂದ ವಿಶ್ರಾಂತಿಯಲ್ಲಿದ್ದ ಆಟಗಾರರು ಅಂಗಣದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ ಎಂದು ಅವರು ಹೇಳಿದ್ರು.
ಕ್ರಿಸ್ಟಿಯಾನೋ ರೋನಾಲ್ಡೊ ಕೂಡ ಈ ಸೋಲಿನಿಂದ ನಿರಾಸೆಯಾಗಿದ್ದಾರೆ. ಸಪ್ಪೆ ಮುಖದೊಂದಿಗೆ ಮೈದಾನದಿಂದ ರೋನಾಲ್ಡೊ ತೆರಳಿದ್ದಾರೆ. ಯಾಕಂದ್ರೆ ಕ್ರಿಸ್ಟಿಯಾನೋ ರೊನಾಲ್ಡೊಗೂ ಗೊತ್ತು. ತಾನು ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ್ರೆ ತಂಡ ಗೆಲುವು ಸಾಧಿಸಿತ್ತು. ಆದ್ರೆ ರೊನಾಲ್ಡೊ ನಿರೀಕ್ಷಿತ ಆಟವನ್ನು ಆಡಲಿಲ್ಲ. ಪೆನಾಲ್ಡಿ ಕಿಕ್ ಅನ್ನು ಕೂಡ ಗೋಲಾಗಿ ಪರಿವರ್ತಿಸಲು ಅವರಿಂದ ಸಾಧ್ಯವಾಗಲಿಲ್ಲ.