CSK ಹೊಸ ದಾಖಲೆ.. 7600 ಕೋಟಿ.. ಭಾರತದಲ್ಲಿಯೇ ನಂಬರ್ 1
ಐಪಿಎಲ್ ನಲ್ಲಿ ನಾಲ್ಕು ಬಾರಿ ಟೈಟಲ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೊಸ ಇತಿಹಾಸ ಸೃಷ್ಟಿಸಿದೆ. csk-1st-unicorn-sports-india saaksha tv
ಮಿಸ್ಟರ್ ಕೂಲ್ ಎಂಎಸ್ ಧೋನಿ ನೇತೃತ್ವದ ಚಾಂಪಿಯನ್ ತಂಡ ಈ ಋತುವಿನ ಆರಂಭಕ್ಕೂ ಮುನ್ನ ಅದ್ಭುತ ದಾಖಲೆ ಬರೆದಿದ್ದಾರೆ.
ಕ್ಯಾಶ್ ರಿಚ್ ಲೀಗ್ನಲ್ಲಿ ಅಸಾಧಾರಣ ಯಶಸ್ಸನ್ನು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಭಾರತದ ಮೊದಲ ಕ್ರೀಡಾ ಯುನಿಕಾರ್ನ್ ಕಂಪನಿಯಾಗಿ ಅವತಾರ ಎತ್ತಿದೆ. CSK ಮಾರ್ಕೆಟ್ ಕ್ಯಾಪ್ 7,600 ಕೋಟಿ ರೂ. ದಾಟಿದೆ.
ಪ್ರಸ್ತುತ ಈ ಕಂಪನಿಯ ಷೇರು ಬೆಲೆ ಬಾಂಡ್ ಮೌಲ್ಯವು ದಾಖಲೆಯ ಮಟ್ಟದಲ್ಲಿ 210-225 ನಡುವೆ ಟ್ರೆಂಡ್ ಆಗುತ್ತಿದೆ.
ಇದರೊಂದಿಗೆ ಸಿಎಸ್ಕೆ ಮಾತೃ ಸಂಸ್ಥೆ ಇಂಡಿಯಾ ಸಿಮೆಂಟ್ಸ್ನ ಮಾರುಕಟ್ಟೆ ಮೌಲ್ಯವನ್ನು ಮೀರಿಸಿದೆ. ಪ್ರಸ್ತುತ ಇಂಡಿಯಾ ಸಿಮೆಂಟ್ ಕಂಪನಿಯ ಷೇರು ಮೌಲ್ಯ 6869 ಕೋಟಿ ರೂ.ಗಳಾಗಿದ್ದರೆ CSK ಮೌಲ್ಯ 7600 ಕೋಟಿ ರೂ.
ಇನ್ನು ಆಟದ ಬಗ್ಗೆ ಹೇಳುವುದಾದರೆ.. ಚೆನ್ನೈ ಐಪಿಎಲ್ ಮೆಗಾ ಹರಾಜು-2022ಕ್ಕೆ ತಯಾರಿ ನಡೆಸುತ್ತಿದೆ.
ಧೋನಿ ಈಗಾಗಲೇ ಚೆನ್ನೈ ತಲುಪಿದ್ದು, ಮೆಗಾ ಹರಾಜು ಬಗ್ಗೆ ಮ್ಯಾನೇಜ್ ಮೆಂಟ್ ಜೊತೆ ಮಾತುಕತೆ ನಡೆಸಿದ್ದಾರೆ.
ಇದಲ್ಲದೇ ಚೆನ್ನೈ ಫ್ರಾಂಚೈಸಿ, ರವೀಂದ್ರ ಜಡೇಜಾ (16 ಕೋಟಿ ರೂ.), ಎಂಎಸ್ ಧೋನಿ (12 ಕೋಟಿ ರೂ.), ಮೊಯಿನ್ ಅಲಿ (8 ಕೋಟಿ ರೂ.) ಮತ್ತು ರುತುರಾಜ್ ಗಾಯಕ್ವಾಡ್ (ರೂ. 6 ಕೋಟಿ) ಆಟಗಾರರನ್ನು ರಿಟೈನ್ಡ್ ಮಾಡಿಕೊಂಡಿದೆ.