CSK | ಚೌಧರಿ ಮೇಲೆ ಧೋನಿ ಫೈರ್.. ಕೂಲ್ ಅಲ್ಲವೇ ಅಲ್ಲ..
ಎಂತಹ ಪರಿಸ್ಥಿತಿಯಲ್ಲಾದ್ರೂ ಕಾಮ್ ಅಂಡ್ ಕೂಲ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೂಲ್ ಕ್ಯಾಪ್ಟನ್ ಎಂಬ ಬಿರುದು ಇದೆ.
ಆದ್ರೆ ಭಾನುವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧೋನಿ ಸಂಯಮ ಕಳೆದುಕೊಂಡಿದ್ದಾರೆ.
ಪಂದ್ಯದ ಅಂತಿಮ ಓವರ್‌ನಲ್ಲಿ ಮುಖೇಶ್ ಚೌಧರಿ ವಿರುದ್ಧ ಧೋನಿ ಸಿಟ್ಟಿಗೆದ್ರು. ಅಂತಿಮ ಓವರ್‌ನಲ್ಲಿ SRH ಗೆಲುವಿಗೆ 37 ರನ್‌ಗಳ ಅಗತ್ಯವಿದ್ದಾಗ ಧೋನಿ ಮುಖೇಶ್ ಕೈಗೆ ಚೆಂಡನ್ನು ನೀಡಿದರು.
ಅಂತಿಮ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕ್ರೀಸ್ ನಲ್ಲಿದ್ದ ನಿಕೋಲಸ್ ಪೂರನ್ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು.
ಈ ಹಿನ್ನೆಲೆಯಲ್ಲಿ ಧೋನಿ ತಕ್ಷಣವೇ ಮೈದಾನದಲ್ಲಿ ಫೀಲ್ಡರ್ ಗಳನ್ನು ಬದಲಾವಣೆ ಮಾಡಿದರು.
ಧೋನಿ ಪೂರಾನ್ ಆಫ್ ಸೈಡ್‌ಫೀಲ್ಡರ್ ಗಳನ್ನು ಸೆಟ್ ಮಾಡಿದರು. ಆದರೆ, ಮುಖೇಶ್ ಲೆಗ್ ಸೈಡ್ ಬಾಲ್ ಎಸೆದರು.
ಅದು ವೈಡ್ ಆಯ್ತು. ಇದರಿಂದ ತಾಳ್ಮೆ ಕಳೆದುಕೊಂಡ ಧೋನಿ, ಆಫ್ ಸೈಡ್ ನಲ್ಲಿದ್ದ ಫೀಲ್ಡರ್ ಗಳನ್ನು ತೋರಿಸಿ, ಸ್ವಲ್ಪ ಯೋಚಿಸಿ ಬೌಲ್ ಮಾಡುವಂತೆ ಮುಖೇಶ್ ಗೆ ಸನ್ನೆ ಮಾಡಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ CSK 13 ರನ್‌ಗಳಿಂದ SRH ವಿರುದ್ಧ ಜಯಗಳಿಸಿತು.
csk-ms-dhoni-loses-cool-after-mukesh-choudhary-bowls