ADVERTISEMENT
Tuesday, July 8, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌, ಲಂಕಾ v ಆಫ್ರಿಕಾ ಮುಖಾಮುಖಿ

ಇಂದು ಕ್ರಿಕೆಟ್ ಅಭಿಮಾನಿಗಳಿಗೆ ಸುಗ್ಗಿಯೋ ಸುಗ್ಗಿ

Author2 by Author2
October 7, 2023
in Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

ಅದ್ಭುತ ಆರಂಭ ಕಂಡಿರುವ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಇಂದು ಡಬಲ್‌ ಧಮಾಕ ನಡೆಯಲಿದ್ದು, ಬಾಂಗ್ಲಾದೇಶ v ಅಫ್ಘಾನಿಸ್ತಾನ ಹಾಗೂ ಸೌತ್‌ ಆಫ್ರಿಕಾ v ಶ್ರೀಲಂಕಾ ತಂಡಗಳು ಹಣಾಹಣಿ ನಡೆಸಲಿವೆ.

ಇಂದಿನ ಮೊದಲ ಪಂದ್ಯ ಬಾಂಗ್ಲಾದೇಶ v ಅಫ್ಘಾನಿಸ್ತಾನ ನಡುವೆ ನಡೆಯಲಿದ್ದು, ಧರ್ಮಶಾಲಾದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಲು ಎರಡು ತಂಡಗಳು ರಣತಂತ್ರ ರೂಪಿಸಿಕೊಂಡಿವೆ. ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲದಿಂದ ಕೂಡಿದ್ದರು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವ ಅನುಭವದ ಆಧಾರದಲ್ಲಿ ಬಾಂಗ್ಲಾ ಪಡೆ ಸ್ವಲ್ಪಮಟ್ಟಿನ ಮೇಲುಗೈ ಹೊಂದಿದೆ.

Related posts

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಳ: ಲಸಿಕೆಯಿಂದಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಳ: ಲಸಿಕೆಯಿಂದಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

July 8, 2025
ಮುಂಗಾರಿನ ಜಲ ವೈಭೋಗದಂತೆ ಶುಬ್ಬಿಯ ಬ್ಯಾಟಿಂಗ್ ಸೊಗಸು

ಮುಂಗಾರಿನ ಜಲ ವೈಭೋಗದಂತೆ ಶುಬ್ಬಿಯ ಬ್ಯಾಟಿಂಗ್ ಸೊಗಸು

July 8, 2025

ನಾಯಕ ಶಕೀಬ್‌-ಅಲ್‌-ಹಸನ್‌ ಬಾಂಗ್ಲಾ ತಂಡಕ್ಕೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಪ್ರಮುಖ ಅಸ್ತ್ರವಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ ನಜೀಮುಲ್‌ ಶ್ಯಾಂಟೊ, ಪ್ರಮುಖ ಅಸ್ತ್ರವಾಗಿದ್ದು, ಇತ್ತೀಚೆಗೆ ನಡೆದ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ವಿಶ್ವಕಪ್‌ನಲ್ಲೂ ಈ ಫಾರ್ಮ್‌ ಮುಂದುವರಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಇವರ ಜೊತೆಗೆ ಟಸ್ಕಿನ್‌ ಅಹ್ಮದ್‌, ಮುಸ್ತಫಿಜುರ್‌ ರಹಮಾನ್‌, ಮುಶ್ಫಿಕರ್‌ ರಹೀಮ್‌ ತಂಡಕ್ಕೆ ಆಸರೆಯಾಗಿದ್ದಾರೆ.

ಮತ್ತೊಂದೆಡೆ ವಿಶ್ವದ ಬಲಿಷ್ಠ ತಂಡಗಳಿಗೆ ಟಕ್ಕರ್‌ ನೀಡುವ ಸಾಮರ್ಥ್ಯ ಹೊಂದಿರುವ ಅಫ್ಘಾನಿಸ್ತಾನಕ್ಕೆ ಆಲ್ರೌಂಡರ್‌ಗಳ ಪಡೆ ಹೊಂದಿದೆ. ಪ್ರಮುಖವಾಗಿ ಸ್ಪಿನ್‌ ಕಿಂಗ್‌ ರಶೀದ್‌ ಖಾನ್‌, ಮುಜೀಬು ಉರ್‌ ರಹಮಾನ್‌, ಮೊಹಮ್ಮದ್‌ ನಬಿ ಪ್ರಮುಖ ಸ್ಪಿನ್‌ ಅಸ್ತ್ರಗಳಾಗಿದ್ದರೆ. ಬ್ಯಾಟಿಂಗ್‌ನಲ್ಲಿ ರಹಮಾನುಲ್ಲಾ ಗುರ್ಬಾಜ್‌, ಹಜ್ಮತುಲ್ಲಾ ಶಹೀದಿ, ನಜೀಬುಲ್ಲಾ ಝದ್ರಾನ್‌ ತಂಡದ ಬ್ಯಾಟಿಂಗ್‌ ಬಲವನ್ನ ಹೆಚ್ಚಿಸಿದ್ದಾರೆ.

ಬಾಂಗ್ಲಾದೇಶ ತಂಡ:
ಶಕೀಬ್‌-ಅಲ್-ಹಸನ್(ನಾಯಕ), ಲಿಟನ್ ದಾಸ್, ತಂಝಿದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದೋಯ್‌, ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ ರಿಯಾದ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಶಾಕ್ ಮಹೆದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜು಼ರ್‌ ರಹಮಾನ್‌, ಹಸನ್‌ ಮಹಮೊದ್‌, ಶೋರಿಫುಲ್ ಇಸ್ಲಾಂ, ತಂಝೀಮ್ ಹಸನ್ ಸಾಕಿಬ್.

ಅಫ್ಘಾನಿಸ್ತಾನ ತಂಡ:
ಹಶ್ಮತುಲ್ಲಾ ಶಹೀದಿ(ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಜಲ್ ರಹಮದ್, ಫಜಲ್ ರಹಕ್ವೀನ್.

ಪಂದ್ಯದ ಸಮಯ: ಬೆಳಗ್ಗೆ 10.30
ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಸೌತ್‌ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಹಣಾಹಣಿಗೆ ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದ್ದು, ಎರಡು ತಂಡಗಳು ಜಯದ ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿವೆ.

ಎರಡು ತಂಡಗಳಲ್ಲಿ ಸ್ಟಾರ್‌ ಆಟಗಾರರ ಪಡೆಯೇ ಇದ್ದು, ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆ ಹೆಚ್ಚಿದೆ. ವಿಶ್ವಕಪ್‌ಗೂ ಮನ್ನ ಆಸೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ 3-2ರಿಂದ ಗೆದ್ದಿದ್ದ ಸೌತ್‌ ಆಫ್ರಿಕಾ ಇದೇ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಸೌತ್‌ ಆಫ್ರಿಕಾ ಪರ ಬ್ಯಾಟಿಂಗ್‌ ವಿಭಾಗದಲ್ಲಿ ಹೆನ್ರಿಕ್‌ ಕ್ಲಾಸೆನ್‌, ಕ್ವಿಂಟನ್‌ ಡಿಕಾಕ್‌, ತೆಂಬಾ ಬವುಮಾ, ಐಡೆನ್‌ ಮಾರ್ಕ್ರಂ, ಡೇವಿಡ್‌ ಮಿಲ್ಲರ್‌ ಪ್ರಮುಖ ಅಸ್ತ್ರವಾಗಿದ್ದಾರೆ. ಇದರ ಜೊತೆಗೆ ಬೌಲಿಂಗ್‌ನಲ್ಲಿ ಕಗೀಸೋ ರಬಾಡ, ಕೇಶವ್‌ ಮಹಾರಾಜ್‌ ತಂಡಕ್ಕೆ ಆಸರೆಯಾಗಲಿದ್ದಾರೆ.

ಮತ್ತೊಂದೆಡೆ ತವರಿನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಶ್ರೀಲಂಕಾ, ಈ ಸೋಲಿನ ಆಘಾತದಿಂದ ಹೊರಬರಲು ಸಜ್ಜಾಗಿದೆ. ಬ್ಯಾಟಿಂಗ್‌-ಬೌಲಿಂಗ್‌ ಎರಡಲ್ಲೂ ಸಮಬಲ ಹೊಂದಿರುವ ಲಂಕಾ ಪಡೆಗೆ ಕುಸಲ್‌ ಮೆಂಡಿಸ್‌, ಚರಿತ್‌ ಹಸಲಂಕ, ಕರುಣಾರತ್ನೆ ಬ್ಯಾಟಿಂಗ್‌ನಲ್ಲಿ ಶಕ್ತಿ ನೀಡಿದ್ದರೆ. ಬೌಲಿಂಗ್‌ನಲ್ಲಿ ಮಹೀಶ್‌ ತೀಕ್ಷಣ, ಮತೀಶ ಪತಿರಾಣ ಹಾಗೂ ಆಲ್ರೌಂಡರ್‌ ದುನಿತ್‌ ವೆಲ್ಲಾಲಗೆ ತಮ್ಮ ಚಾಣಾಕ್ಷ ಬೌಲಿಂಗ್‌ನಿಂದ ಕಮಾಲ್‌ ಮಾಡಲಿದ್ದಾರೆ. ಹೀಗಾಗಿ ಲಂಕಾದ ಸ್ಪಿನ್ನರ್‌ಗಳ ಸವಾಲನ್ನ ಸೌತ್‌ ಆಫ್ರಿಕಾ ಬ್ಯಾಟರ್‌ಗಳು ಯಾವ ರೀತಿ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಸೌತ್‌ ಆಫ್ರಿಕಾ ತಂಡ:
ತೆಂಬಾ ಬವುಮಾ(ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ, ವ್ಯಾನ್‌ ದರ್‌ ದುಸೇನ್‌, ಲಿಜಾ಼ಡ್‌ ವಿಲಿಯಮ್ಸ್‌.
ಶ್ರೀಲಂಕಾ ತಂಡ:
ದಸುನ್ ಶನಕ(ನಾಯಕ), ಕುಸಲ್ ಮೆಂಡಿಸ್, ಕುಸಲ್ ಪೆರೇರ, ಪತುಮ್ ನಿಸ್ಸಂಕ, ಲಹಿರು ಕುಮಾರ, ದಿಮುತ್ ಕರುಣಾರತ್ನೆ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿಸಿಲ್ವ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ಮತೀಶ ಪತಿರಾನ, ಮತೀಶ ಪತಿರಾನ, ದಿಲ್ಶಾನ್‌ ಮಧುಶಂಕ, ದುಶಾನ್‌ ಹೇಮಂತ. ಚಾಮಿಕಾ ಕರುಣಾರತ್ನೆ(ರಿಸರ್ವ್‌ ಪ್ಲೇಯರ್‌)
ಪಂದ್ಯದ ಸಮಯ: ಮಧಾಹ್ನ 2

Tags: AfghanistanBangladeshCWC 2023South AfricaSri Lanka
ShareTweetSendShare
Join us on:

Related Posts

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಳ: ಲಸಿಕೆಯಿಂದಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಳ: ಲಸಿಕೆಯಿಂದಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

by Shwetha
July 8, 2025
0

ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ...

ಮುಂಗಾರಿನ ಜಲ ವೈಭೋಗದಂತೆ ಶುಬ್ಬಿಯ ಬ್ಯಾಟಿಂಗ್ ಸೊಗಸು

ಮುಂಗಾರಿನ ಜಲ ವೈಭೋಗದಂತೆ ಶುಬ್ಬಿಯ ಬ್ಯಾಟಿಂಗ್ ಸೊಗಸು

by Shwetha
July 8, 2025
0

ಮಳೆಗಾಲದ ಸೊಗಸಿಗೆ ಸದಾ ಸಾಕ್ಷಿಯಾಗುವ ನಮ್ಮ ಮಲೆನಾಡು, ಕರಾವಳಿಯಲ್ಲಿ ಮುಂಗಾರು ಮಳೆ ಹನಿಗಳ ನೀನಾದ ಕೇಳುವುದು ಎಂಥವರ ಮನಸ್ಸಿಗೂ ಆಹ್ಲಾದಕರ ಭಾವ ಉಂಟುಮಾಡುವ ಅನುಭೂತಿ. ನೀವು ಗಮನಿಸಿ...

ನಮ್ಮ ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಮಿಂಚು..!

ನಮ್ಮ ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಮಿಂಚು..!

by Shwetha
July 6, 2025
0

ಚಾಂಪಿಯನ್ ನೀರಜ್ ಚೋಪ್ರಾ ಹೆಸರಿಗೆ 2025ರ ಎನ್‍ಸಿ ಕ್ಲಾಸಿಕ್ ಚಿನ್ನದ ಪದಕ ಸೇರಿಕೊಂಡಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಎನ್ ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ...

ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.. ಆದ್ರೂ ಅಪಾಯಕಾರಿ ಬ್ಯಾಟರ್ ಈ ನಮ್ಮ ರಿಷಬ್ ಪಂತ್..!

ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.. ಆದ್ರೂ ಅಪಾಯಕಾರಿ ಬ್ಯಾಟರ್ ಈ ನಮ್ಮ ರಿಷಬ್ ಪಂತ್..!

by Shwetha
July 6, 2025
0

ಸ್ವಲ್ಪ ಮನಸು, ಸ್ವಲ್ಪ ತಾಳ್ಮೆ ಇರುತ್ತಿದ್ರ್ರೆ ರಿಷಬ್ ಪಂತ್‍ಗೆ ಮತ್ತೊಂದು ಶತಕ ದಾಖಲಿಸಬಹುದಿತ್ತು.. ಯಾಕೋ ಏನೋ ಭೋಜನ ವಿರಾಮದ ನಂತ್ರ ಪಂತ್ ಸ್ವಲ್ಪ ನಿಧಾನಗತಿಯ ಬ್ಯಾಟಿಂಗ್‍ಗೆ ಮುಂದಾದ್ರು....

ಮತ್ತೊಂದು ದಾಖಲೆ ಬರೆದ ವೈಭವ್ ಸೂರ್ಯವಂಶಿ..!

ಮತ್ತೊಂದು ದಾಖಲೆ ಬರೆದ ವೈಭವ್ ಸೂರ್ಯವಂಶಿ..!

by Shwetha
July 6, 2025
0

ಈ ಬಾಲಕನ ಆಟಕ್ಕೆ ಏನು ಅನ್ನಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೊಡಿಬಡಿ ಆಟ.. ಯಾವಾಗ ಔಟ್ ಆಗ್ತಾನೋ ಗೊತ್ತಿಲ್ಲ.. ಆದ್ರೂ ಕ್ರೀಸ್‍ನಲ್ಲಿದ್ದಷ್ಟು ಸಮಯವಂತೂ ಪಕ್ಕಾ ಮನರಂಜನೆ.. ತನ್ನ ಹೆಸರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram