ವಿಶ್ವದ ಕ್ರಿಕೆಟ್ ಪ್ರೇಮಿಗಳು ಕುತೂಹಲದದಿಂದ ಕಾಯುತ್ತಿರುವ ಏಕದಿನ ವಿಶ್ವಕಪ್-2023 ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಶಸ್ತಿ ಸುತ್ತಿನಲ್ಲಿ ಜಿದ್ದಾಜಿದ್ದಿನ ಕಾಳಗ ನಡೆಸಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ.
ದಶಕಗಳ ಇತಿಹಾಸ ಹೊಂದಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹಲವು ದಿಗ್ಗಜ ಆಟಗಾರರು ತಮ್ಮದೇ ಛಾಪು ಮೂಡಿಸಿದ್ದಾರೆ. ಈ ನಡುವೆ ವಿಶ್ವಕಪ್‌ನ ಫೈನಲ್ ಕದನದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಹಲವು ಸ್ಟಾರ್ ಆಟಗಾರರು ಚಾಂಪಿಯನ್ ತಂಡಗಳ ಪ್ರಶಸ್ತಿ ಗೆಲುವಿನ ಹೀರೋಗಳಾಗಿ ಮಿಂಚುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಇದರ ಬೆನ್ನಲ್ಲೇ ಪ್ರಸಕ್ತ ವಿಶ್ವಕಪ್‌ನ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡ ಗೆಲುವಿನ ಹೀರೋ ಆಗಬಲ್ಲ ಆಟಗಾರ ಯಾರು? ಎಂಬ ಕುತೂಹಲ ಮೂಡಿಸಿದೆ. 1975ರಿಂದ ಆರಂಭಗೊಂಡು 2019ರವರೆಗೆ ನಡೆದಿರುವ 12 ಏಕದಿನ ವಿಶ್ವಕಪ್ ಆವೃತ್ತಿಗಳ ಫೈನಲ್ ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ ವಿಜೇತರು – ವಿಶ್ವಕಪ್ ಫೈನಲ್‌ಗಳಲ್ಲಿ
1975 – ಕ್ಲೈವ್ ಲಾಯ್ಡ್
1979 – ವಿವ್ ರಿಚರ್ಡ್ಸ್
1983 – ಮಹೇಂದರ್ ಅಮರನಾಥ್
1987 – ಡೇವಿಡ್ ಬೂನ್
1992 – ವಾಸಿಂ ಅಕ್ರಮ್
1996 – ಅರವಿಂದ ಡಿಸಿಲ್ವಾ
1999 – ಶೇನ್ ವಾರ್ನ್
2003 – ರಿಕಿ ಪಾಂಟಿಂಗ್
2007 – ಆಡಮ್ ಗಿಲ್‌ಕ್ರಿಸ್ಟ್
2011 – ಎಂ.ಎಸ್. ಧೋನಿ
2015 – ಜೇಮ್ಸ್ ಫಾಲ್ಕನರ್
2019 – ಬೆನ್ ಸ್ಟೋಕ್ಸ್
2023 – ?
CWC 2023, IND v AUS, Team India, Australia, World Cup, Final Match