ಏಕದಿನ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಅಲೆಯಲ್ಲಿರುವ ಟೀಂ ಇಂಡಿಯಾ, ಇದೀಗ ಪಾಕಿಸ್ತಾನ ವಿರುದ್ಧ ನಡೆಯುವ ಹೈವೋಲ್ಟೇಜ್ ಪಂದ್ಯಕ್ಕಾಗಿ ತಯಾರಿ ಆರಂಭಿಸಿದೆ.
ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಈಗಾಗಲೇ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ವಿರುದ್ಧ ಜಯಭೇರಿ ಬಾರಿಸಿರುವ ರೋಹಿತ್ ಪಡೆ, ಅ.14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ರೋಚಕ ಹಣಾಹಣಿಗೆ ಸಜ್ಜಾಗಿದೆ. ಪಾಕ್ ತಂಡದ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಇದೀಗ ಅಹ್ಮದಾಬಾದ್ಗೆ ಬಂದಿಳಿದಿದ್ದು, ಅಭ್ಯಾಸ ಕೂಡ ಆರಂಭಿಸಲಿದ್ದಾರೆ.
ಗಿಲ್ ಕಣಕ್ಕಿಳಿಯುವ ಸಾಧ್ಯತೆ:
ಡೆಂಘೀ ಜ್ವರದಿಂದಾಗಿ ವಿಶ್ವಕಪ್ನ ಆರಂಭಿಕ ಎರಡು ಪಂದ್ಯದಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಟೀಂ ಇಂಡಿಯಾ ಆಟಗಾರರಿಗೂ ಮುನ್ನ ಚೆನ್ನೈನಿಂದ ಅಹ್ಮದಾಬಾದ್ಗೆ ಬಂದಿಳಿದಿರುವ ಗಿಲ್, ತಂಡದ ಇತರ ಆಟಗಾರರೊಂದಿಗೆ ನೆಟ್ಸ್ನಲ್ಲಿ ಅಭ್ಯಾಸ ಸಹ ನಡೆಸಿದ್ದಾರೆ. ಹೀಗಾಗಿ ಅಹ್ಮದಾಬಾದ್ನಲ್ಲಿ ನಡೆಯುವ ಪಂದ್ಯದಲ್ಲಿ ಶುಭ್ಮನ್ ಗಿಲ್, ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೆಚ್ಚಾಗಿದೆ.
Touchdown Ahmedabad 🛬
📹 Capturing the journey, featuring a surprise in-flight celebration 🤩#CWC23 | #DattKePakistani | #WeHaveWeWill pic.twitter.com/qxe0mO9p8X
— Pakistan Cricket (@TheRealPCB) October 11, 2023
ಅಭ್ಯಾಸ ಆರಂಭಿಸಿದ ಪಾಕ್:
ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಪಾಕಿಸ್ತಾನ, ಸತತ ಎರಡು ಪಂದ್ಯಗಳನ್ನ ಗೆದ್ದು ಪ್ರಾಬಲ್ಯ ಮೆರೆದಿದೆ. ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಜಯಭೇರಿ ಬಾರಿಸಿರುವ ಪಾಕ್ ಪಡೆ, ಇದೀಗ ರೋಹಿತ್ ಪಡೆಯನ್ನ ಅವರದ್ದೇ ನೆಲದಲ್ಲಿ ಮಣಿಸುವ ಮೂಲಕ ಹೊಸ ಇತಿಹಾಸ ಬರೆಯುವ ಲೆಕ್ಕಾಚಾರದಲ್ಲಿದೆ.
CWC 2023, Team India, Pakistan, ODI Cricket, World Cup