D K Shivakumar | ಭ್ರಷ್ಟಾಚಾರ ವಿರುದ್ಧ ಭಾರತ್ ಜೋಡೋ ಯಾತ್ರೆ
ತುಮಕೂರು : ಈ ದೇಶದ ಐಕ್ಯತೆ, ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ವಿರುದ್ಧ ಭಾರತ್ ಜೋಡೋ ಯಾತ್ರೆ. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುಬ್ಬಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇವತ್ತು ತುಮಕೂರು ಜಿಲ್ಲೆಯ ಸಂಘಟನೆ ವಿಚಾರಕ್ಕೆ ಬಂದಿದ್ದೇನೆ.
ನಮ್ಮ ಯಾತ್ರೆ ೫೧೦ ಕಿಮಿ ೨೨ ದಿನ ಕರ್ನಾಟಕದಲ್ಲಿ ಅತಿಹೆಚ್ಚು ದಿನ ನಡೆಯಲಿದೆ. ಈ ದೇಶದ ಐಕ್ಯತೆ, ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ವಿರುದ್ಧ ಭಾರತ್ ಜೋಡೋ ಯಾತ್ರೆ.
ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ತುಮಕೂರು ಜಿಲ್ಲೆಯಲ್ಲಿ ನಾಲ್ಕು ದಿನ ಯಾತ್ರೆ ನಡೆಯಲಿದೆ. ಪ್ರತಿ ದಿನ ೨೦ ಸಾವಿರ ಜನ ಭಾಗಿಯಾಗುತ್ತಾರೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಯಾತ್ರೆ ನಡುವೆ ಯಾರೂ ರಾಹುಲ್ ಗಾಂಧಿಗೆ ಹೂವಿನ ಹಾರ ಹಾಕದಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡರು.
ಪ್ರತಿ ದಿನ ೨೫ ಕಿಮಿ ನಡೆಯುತ್ತಾರೆ. ಯಾತ್ರೆ ನಡುವೆ ಪ್ರಮುಖ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ.
ತುರುವೇಕೆರೆ, ಕಲ್ಲೂರು ಕ್ರಾಸ್, ನಿಟ್ಟೂರು,ಚೇಳೂರು, ಶಿರಾ ತಾವರೆಕೆರೆ ಮೂಲಕ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡಲಿದೆ. ಅಕ್ಟೋಬರ್ ೯-೧೩ ರವರೆಗೆ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.