ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

D K Shivakumar | ಚಿತ್ರನಟರ ಮಾತಿಗೆ ಚರ್ಚೆ ಮಾಡುವ ಅಗತ್ಯವಿಲ್ಲ  

Mahesh M Dhandu by Mahesh M Dhandu
April 28, 2022
in Newsbeat, State, ರಾಜ್ಯ
D K Shivakumar

D K Shivakumar

Share on FacebookShare on TwitterShare on WhatsappShare on Telegram

D K Shivakumar | ಚಿತ್ರನಟರ ಮಾತಿಗೆ ಚರ್ಚೆ ಮಾಡುವ ಅಗತ್ಯವಿಲ್ಲ  

ಬೆಂಗಳೂರು : ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರ ಸಚಿವರು ಯಾರಾದರೂ ಈ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ಉತ್ತರ ನೀಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Related posts

india-judo-two-gold-one-silver-commonwealth-games-2026-history

cwg-2026- ನೀಗಿದ 35 ವರ್ಷಗಳ ಬರ.. ಎರಡು ಚಿನ್ನ. ಒಂದು ಬೆಳ್ಳಿ.. ಜುಡೋ ಅಖಾಡದಲ್ಲಿ ಮೊಳಗಿದ ಭಾರತದ ರಾಷ್ಟ್ರಗಿತೆ.

August 1, 2026
cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

August 1, 2026

ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ವಿಚಾರವಾಗಿ ಕಿಚ್ಚ ಸುದೀಪ್ – ಅಜಯ್ ದೇವಗನ್ ಟ್ವಿಟ್ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಯಾರ ಟ್ವೀಟ್ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಸಿದ್ದನಿಲ್ಲ. ದೇಶದಲ್ಲಿ ಯಾವ, ಯಾವ ಭಾಷೆಗೆ ಯಾವ ಮಾನ್ಯತೆ ನೀಡಬೇಕು ಎಂದು ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ. ನಮ್ಮ ರಾಜ್ಯದ ಕೊಡಗು, ಮಂಗಳೂರು ಭಾಗಗಳಲ್ಲಿ ಬೇರೆ ಭಾಷೆಗಳನ್ನು ಮಾತನಾಡಿದರೂ, ನಾವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಾವೆಲ್ಲ ಕನ್ನಡಿಗರು. ನಮಗೆ ನಮ್ಮದೇ ಆದ ಭಾಷೆ, ಧ್ವಜ, ಸ್ವಾಭಿಮಾನವಿದೆ ಎಂದಿದ್ದಾರೆ.

ನಮ್ಮ ನೋಟಿನಲ್ಲಿ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿ ಮುದ್ರಣ ಮಾಡಲಾಗಿದೆ. ಈ ನೋಟು ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಚಲಾವಣೆಯಾಗುತ್ತದೆ. ಹೀಗಾಗಿ ಭಾಷೆ ವಿಚಾರದಲ್ಲಿ ಚರ್ಚೆಯ ಅಗತ್ಯ ಏನಿದೆ ಎಂದು ಪ್ರಶ್ನಿಸಿರುವ ಡಿಕೆಶಿ, ದೇಶದ ಉತ್ತರ ಭಾಗದಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದು, ಆ ಭಾಷೆಗೆ ಯಾವ ರೀತಿ ಗೌರವ ನೀಡಬೇಕೋ ಅದನ್ನು ನೀಡಲಾಗುತ್ತಿದೆ. ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರ ಸಚಿವರು ಯಾರಾದರೂ ಈ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ಉತ್ತರ ನೀಡೋಣ ಎಂದಿದ್ದಾರೆ.

d k shivakumar reaction kiccha sudeep statement saaksha tv

ಇನ್ನು ನಮ್ಮ ನೆಲ, ಜಲ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಮೊದಲ ಪ್ರಾತಿನಿಧ್ಯ ಕನ್ನಡ ಭಾಷೆಯಾಗಿರುತ್ತದೆ. ನಂತರ ನಾವು ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕಿನ ಪ್ರಕಾರ ಬೇರೆ ಭಾಷೆಗಳನ್ನು ಬಳಸಬಹುದು. ನಮ್ಮ ಕೆಲವು ಸಂಸದರು ಹಿಂದಿ ಹಾಗೂ ಇಂಗ್ಲಿಷ್ ಭಾಷೆ ತಿಳಿದಿದ್ದರೂ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾರೆ. ಇದಕ್ಕೆ ಅವಕಾಶವಿದೆ. ನನ್ನ ಸಹೋದರ ಹಲವು ಬಾರಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ವಿರೋಧಪಕ್ಷದ ನಾಯಕರಾಗಿರುವ ಕಾರಣ ಹಿಂದಿಯಲ್ಲಿ ಮಾತನಾಡುತ್ತಾರೆ.  ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಯ ಗೌರವ ಉಳಿಸಿಕೊಳ್ಳಲು ನಾವು ಏನು ಮಾಡಬೇಕು ಅದನ್ನು ಮಾಡೋಣ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. d k shivakumar reaction kiccha sudeep statement

Tags: #Saaksha TVCongressD K SHivakumaKiccha Sudeepa
ShareTweetSendShare
Join us on:

Related Posts

india-judo-two-gold-one-silver-commonwealth-games-2026-history

cwg-2026- ನೀಗಿದ 35 ವರ್ಷಗಳ ಬರ.. ಎರಡು ಚಿನ್ನ. ಒಂದು ಬೆಳ್ಳಿ.. ಜುಡೋ ಅಖಾಡದಲ್ಲಿ ಮೊಳಗಿದ ಭಾರತದ ರಾಷ್ಟ್ರಗಿತೆ.

by admin
August 1, 2026
0

ಜೂಡೋ ಸ್ಪರ್ಧೆಯಲ್ಲಿ ಇತಿಹಾಸ ಬರೆದ ಭಾರತದ ಸ್ಪರ್ಧಿಗಳು. ಎರಡು ಚಿನ್ನ, ಒಂದು ಬೆಳ್ಳಿ. 35 ವರ್ಷಗಳ ಬರ ನೀಗಿಸಿದ ಭಾರತೀಯ ಜೂಡೋ ಸ್ಪರ್ಧಿಗಳು. 1990ರ ಆಕ್ಲಂಡ್ ಕಾಮನ್‍ವೆಲ್ತ್...

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

by admin
August 1, 2026
0

ಭಾರತದ ಹೇವಿ ವೇಯ್ಟ್ ವೇಟ್ ಲಿಫ್ಟರ್ ಲವ್ ಪ್ರೀತ್ ಸಿಂಗ್ ಅವರು 2026ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾನೆ. ವೃತ್ತಿ ಜೀವನದಲ್ಲಿ...

majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

by admin
August 1, 2026
0

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್‍ಗಳಿವೆ. ಈ ಪೈಕಿ 2...

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

by admin
July 31, 2026
0

ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..? ಈಕೆ ತ್ರಿಪುರಾದ ಹುಡುಗಿ. ಕಾಮನ್‍ವೆಲ್ತ್ ಗೇಮ್ಸ್‍ನ ಜೂಡೋ ವಿಭಾಗದಲ್ಲಿ ಚಿನ್ನದ ಗೆದ್ದ ಹುಡುಗಿ....

duleep-trophy-vaibhav-suryavanshi-east-zone-vice-captain-controversy

Cricket – ದುಲೀಪ್ ಟ್ರೊಫಿ – ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..?

by admin
July 31, 2026
0

ದುಲೀಪ್ ಟ್ರೊಫಿ- ಪೂರ್ವ ವಲಯಕ್ಕೆ ವೈಭವ್ ಉಪನಾಯಕ..! ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..? ಕೇವಲ 8 ದೇಶಿಯ ಪಂದ್ಯಗಳನ್ನು ಆಡಿರುವ ವೈಭವ್‍ಗೆ ಉಪನಾಯಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram