ಅಮೃತಾ ಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್…. !!!!
ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಬಡವ ರಾಸ್ಕಲ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಅವರ ಜೋಡಿ ತೆರೆ ಮೇಲೆ ಮೋಡಿ ಮಾಡಿದೆ. ರೀಲ್ ಅಲ್ಲದೇ ರಿಯಲ್ ಲೈಫ್ ನಲ್ಲೂ ಈ ಜೋಡಿಯನ್ನ ಪ್ರೇಕ್ಷಕರು ಇಷ್ಟ ಪಡಿಸುತ್ತಿದ್ದಾರೆ.
ಅಮೃತಾ ಈಗ ಡಾಲಿ ಧನಂಜಯ್ ಗೆ ಪ್ರಪೋಸ್ ಮಾಡಿದ್ದಾರೆ. ಜಿ ಕನ್ನಡ ವಾಹಿನಿಯಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಇಂಥದೊದು ಸನ್ನಿವೇಶ ನಡೆದಿದೆ. ಜಿ ಕನ್ನಡ ಸೋಶಿಯಲ್ ಮೀಡಿಯಾ ಪೆಜ್ ಗಳಲ್ಲಿ ಈ ವೀಡಿಯೋ ಹಂಚಿಕೊಂಡಿದ್ದು ಸಖತ್ ವೈರಲ್ ಆಗ್ತಿದೆ. ಅಭಿಮಾನಿಗಳು ಕಂಗ್ರಾಜುಲೇಷನ್ ಡಾಲಿ ಬಾಯ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
ತನ್ನ ಬದುಕಿನ ಬೆಸ್ಟ್ ಸ್ನೇಹಿತ ಬಗ್ಗೆ ಮಾತನಾಡುವ ಕಾರ್ಯಕ್ರಮ ಗೋಲ್ಡನ್ ಗ್ಯಾಂಗ್ , ಈ ಶೋ ಗೆ ಅತಿಥಿಯಾಗಿ ಬಂದಿರುವ ಧನಂಜಯ್ ಅಮೃತ ಎದುರು “ ಮಂಡಿಯೂರಿ ಬೇಡುವುನು ಹೃದಯ ಕಾಲಡಿ ಇಡುವೆನು ತೆಗೆದು ಬಚ್ಚಿಟ್ಟಿಕೋ ಇಲ್ಲಾ… ತೊಳೆದು ಕಾಲ್ ತೊಳೆದುಕೋ ಬೇಡ ಮೌನ ಮಾಡು ತೀರ್ಮಾನ ದು ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.
ಜನವರಿ 29 ಮತ್ತು 30 ರಂದು ಈ ಎಪಿಸೋಡ್ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.