ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ಫಿಟ್ನೆಸ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಜೈಲಿನ ಅಧಿಕಾರಿಗಳಿಗೆ ವಿಟಮಿನ್ ಪೌಡರ್ ಬೇಕೆಂದು ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಆದರೆ, ದರ್ಶನ್ ಬೇಡಿಕೆಯನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಕೊಲೆ ಪ್ರಕರಣದಲ್ಲಿ ಮೊದಲು ಪರಪ್ಪನ ಅಗ್ರಹಾರ ಸೇರಿದ್ದ ದರ್ಶನ್, ಅಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿಯಾಗಿದ್ದ ದರ್ಶನ್ ಗೆ ಬಾಡಿ ಫಿಟ್ನೆಸ್ ಬಗ್ಗೆ ಚಿಂತೆಯಿರಲಿಲ್ಲ. ಆದರೆ, ಈಗ ಬಳ್ಳಾರಿಯ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಎಲ್ಲ ಕೈದಿಗಳಂತೆಯೇ ದರ್ಶನ್ ವಾಸಿಸಬೇಕು. ಅಲ್ಲಿನ ಕೈದಿಗಳು ಮಾಡಿರುವ ಊಟವನ್ನೇ ಮಾಡಬೇಕು. ಹೀಗಾಗಿ ದರ್ಶನ್ ಗೆ ಫಿಟ್ನೆಸ್ ಕಾಟ ಶುರುವಾಗಿದೆ. ಸದಾ ನಾನ್ ವೆಜ್ ಊಟವನ್ನೇ ಮಾಡುತ್ತಿದ್ದ ದರ್ಶನ್ ದೇಹ ಸೊರಗುತ್ತಿದೆ. ಹೀಗಾಗಿ ಅವರು ಫಿಟ್ನೆಸ್ ಗಾಗಿ ಅಧಿಕಾರಿಗಳ ಮುಂದೆ ಮನವಿ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ ಎನ್ನಲಾಗುತ್ತಿದೆ.