ದರ್ಶನ್ ಹಲ್ಲೆ ಪ್ರಕರಣ – ಪದೇ ಪದೇ ದಲಿತ ಪದ ಬಳಸಿದ ಇಂದ್ರಜಿತ್ ಗೆ ಸಂಕಷ್ಟ ಶುರು..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹೊಟೆಲ್ ಸಿಬ್ಬಂದಿ ಮೇಲೆ ಹಲ್ಲೆಯ ಗಂಭೀರ ಆರೋಪ ಮಾಡಿ ಬಳಿಕ ದರ್ಶನ್ ವಿರುದ್ಧ ಮಾಧ್ಯಮದವರ ಮುಂದೆ ವಾಗ್ದಾಳಿ ನಡೆಸುತ್ತಾ ಇದ್ದಾರೆ.. ಈ ರೀತಿಯಾಗಿ ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಇಂದ್ರಜಿತ್ ಲಂಕೇಶ್ ವಿರುದ್ಧ ಇದೀಗ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ದಲಿತ ಎನ್ನುವ ಪದವನ್ನ ಪದೇ ಪದೇ ಬಳಸಿ, ಸಮುದಾಯವನ್ನು ಎತ್ತು ಕಟ್ಟುವ ಪ್ರಯತ್ನ ಮಾಡಿದ್ದಾರೆ, ಸಮುದಾಯಕ್ಕೆ ಕೋಪ ಬರುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ. ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ ಘಟನೆಯಲ್ಲಿ ಸಪ್ಲೈಯರ್ ದಲಿತ ಎಂದು ಪದೇ ಪದೇ ಒತ್ತಿ ಹೇಳಿದರು. ಈ ಕೇಸ್ ನಲ್ಲಿ ದಲಿತರನ್ನು ಎತ್ತು ಕಟ್ಟುವ ಕೆಲಸ ಉದ್ದೇಶದಿಂದ ಹೀಗೆ ಹೇಳಿದರು. ಬೇರೆ ಸಮುದಾಯದವರ ಮೇಲೆ ದ್ವೇಷ ಹುಟ್ಟಿಸುವ ಹೇಳಿಕೆ ಕೊಟ್ಟಿದ್ದಾರೆ, ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ಇದೇ ವೇಳೆ ಮೈಸೂರು ಪೋಲೀಸರು ಕಾಂಪ್ರಮೈಜ್ ಆಗಿದ್ದಾರೆ. ಮೈಸೂರಿನ ಎಲ್ಲಾ ಪೋಲೀಸ್ ಸ್ಟೇಷನ್ ಗಳು ಸೆಟಲ್ ಮೆಂಟ್ ಸ್ಟೇಷನ್ ಆಗಿದೆ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಮೈಸೂರು ಪೊಲೀಸರಿಗೆ ಅವಮಾನಿಸಲಾಗಿದೆ. ಇಂದ್ರಜಿತ್ ವಿರುದ್ದ ಮೈಸೂರು ಪೋಲೀಸರು ಮಾನ ನಷ್ಟ ಮೊಕೊದ್ದಮೆ ಹಾಕಿ ಎಂದು ಆಗ್ರಹಿಸಿದ್ದಾರೆ.