ದಾವಣಗೆರೆ | ಗೋಡೌನ್ ನಲ್ಲಿ ಸಂಗ್ರಹಿಸಿದ್ದ ಸ್ಫೋಟಕ ವಶ

1 min read
Davanagere

ದಾವಣಗೆರೆ | ಗೋಡೌನ್ ನಲ್ಲಿ ಸಂಗ್ರಹಿಸಿದ್ದ ಸ್ಫೋಟಕ ವಶ

ದಾವಣಗೆರೆ : ಗೋಡೌನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕ ವಸ್ತುಗಳನ್ನ ದಾವಣಗೆರೆ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಬಿ.ಎಸ್. ವಿಕ್ರಮ್, ನಾಗರಾಜ್, ಕೆ. ವಿಜಯಕುಮಾರ್, ಮಂಜುನಾಥ ಬಂಧಿಸಲಾಗಿದೆ.

ತಾಲೂಕಿನ ಕಾಡಜ್ಜಿ ಗ್ರಾಮದ ಸರ್ವೆ ನಂಬರ್ 54/ಐಪಿ, 53/4 ರಲ್ಲಿರುವ ಷಣ್ಮುಖಪ್ಪ ಎಂಬುವರಿಗೆ ಸೇರಿದ ಶ್ರೀ ದುರ್ಗಾದೇವಿ ಎಕ್ಸಪ್ಲೋಸಿವ್ ಮ್ಯಾಗ್‍ಜಿನ್‍ನ ಬಳಿ ಇರುವ ಗೋಡೌನ್‍ನಲ್ಲಿ ಸ್ಟೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು.

Davanagere

ಇದರ ಖಚಿತ ಮಾಹಿತಿ ಮೇರೆಗೆ ಆಂಟಿ ಸಬೋಟೇಜ್ ಚೆಕ್ ಟೀಮ್ (ಎಎಸ್ ಸಿ) (ದುಷ್ಕøತ್ಯ ನಿಗ್ರಹ ದಳ) ಮತ್ತು ದಾವಣಗೆರೆ ಗ್ರಾಮಾಂತರ  ಠಾಣೆಯ ಪೊಲೀಸರು ದಾಳಿ ನಡೆಸಿ 3,62,000 ರೂಪಾಯಿ ಬೆಲೆ ಬಾಳುವ ಸ್ಪೋಟಕವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ದಾಳಿ ವೇಳೆ ಐಡಿಯಕ್ ಪವರ್-90 ಎಕ್ಸಪ್ಲೋಸಿವ್ 10,000 ಜಿಲೆಟಿನ್ ಕಡ್ಡಿಗಳು, ಅಲ್ಯೂಮಿನಿಯಂ ಎಲೆಕ್ಟ್ರಿಕಲ್ 7400, ಆಪೀಟಿಕ್ಸ್ 50 ಕೆಜಿಯ ಐದು ಚೀಲಗಳು ಮತ್ತು ಬೊಲೆರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಗೋಡೌನ್ ಮಾಲೀಕ ಷಣ್ಮುಖಪ್ಪ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd