ದಾವೂದ್ ಇಬ್ರಾಹಿಂ ಸೋದರ ಕಸ್ಕರ್‌ ಪಾಕಿಸ್ತಾನಕ್ಕೆ ಪರಾರಿ

1 min read
Dawood Ibrahim's brother Kaskar escapes to Pakistan Saaksha_tv

ದಾವೂದ್ ಇಬ್ರಾಹಿಂ ಸೋದರ ಕಸ್ಕರ್‌ ಪಾಕಿಸ್ತಾನಕ್ಕೆ ಪರಾರಿ Saaksha Tv

ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರ ಸಂಬಂಧಿ ಸೊಹೈಲ್ ಕಸ್ಕರ್‌ ಅಮೆರಿಕದಿಂದ ದುಬೈ ಮೂಲಕ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ. ಇತನನ್ನು ಬಂಧಿಸಿ ಭಾರತಕ್ಕೆ ಕರೆತರುವ ಪ್ರಯತ್ನ ಮುಂಬೈ ಪೊಲೀಸರು ಮಾಡುತ್ತಿದ್ದರು.

ಮಾದಕ ವಸ್ತು ಮತ್ತು ಭಯೋತ್ಪಾದನೆ ಪ್ರಕರಣದಲ್ಲಿ ಕಸ್ಕರ್‌ನು ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ. ಈತನು ಅಮೆರಿಕದಲ್ಲಿದ್ದನ್ನು ಕಚಿತ ಪಡಿಸಿಕೊಂಡ ಮುಂಬಯಿ ಪೊಲೀಸ್ ರು ಅಮೆರಿಕ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದರು. ಕಸ್ಕರ್‌ನನ್ನು ಭಾರತದ ವಶಕ್ಕೆ ಪಡೆದುಕೊಳ್ಳಲು ಮುಂಬಯಿ ಪೊಲೀಸರು ಮತ್ತು ಅಮೆರಿಕ ಸಂಸ್ಥೆಗಳ ನಡುವೆ ಸಮನ್ವಯ ಪ್ರಯತ್ನಗಳು ನಡೆದಿದ್ದವು.

Dawood Ibrahim's brother Kaskar escapes to Pakistan Saaksha Tv

ಕಸ್ಕರ್ ವಿರುದ್ಧ ಭಾರತದಲ್ಲಿ ಯಾವುದೇ ನಿರ್ದಿಷ್ಟ ಆರೋಪಗಳು ಇಲ್ಲದೆ ಇದ್ದರೂ, ದಾವೂದ್ ಇಬ್ರಾಹಿಂ ಪತ್ತೆಗಾಗಿ ಮುಂಬಯಿ ಪೊಲೀಸರು ಕಸ್ಕರ್ ಮೇಲೆ ನಿಗಾ ಇರಿಸಿದ್ದರು, ಆದರೆ ಈಗ ಅವನು ಅಮೆರಿಕದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ.

 

2009ರಲ್ಲಿ ಕರಾಚಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ನೂರಾ ಮಗ ಎನ್ನಲಾಗಿರುವ ಕಸ್ಕರ್, 1989ರಲ್ಲಿ ಭಾರತವನ್ನು ತೊರೆದಿದ್ದ ಎಂದು ಹೇಳಲಾಗಿದೆ. 2014ರಲ್ಲಿ ಮಾದಕ ವಸ್ತು ಭಯೋತ್ಪಾದನೆ ಮತ್ತು ಕೊಲಂಬಿಯಾ ಬಂಡುಕೋರರಿಗೆ ನೆರವು ನೀಡಿದ ಹಾಗೂ ಅಮೆರಿಕಕ್ಕೆ ಹೆರಾಯಿನ್ ರವಾನಿಸಿದ ಆರೋಪಗಳಡಿ ಸ್ಪೇನ್‌ನಲ್ಲಿ ಆತನನ್ನು ಬಂಧಿಸಲಾಗಿತ್ತು. ಒಂದು ವರ್ಷದ ಬಳಿಕ ಆತನನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿತ್ತು. ಅಲ್ಲಿ ಆತ ಕೆಲವು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd