DC vs PBKS match | ಡೆಲ್ಲಿ ಕ್ಯಾಪಿಟಲ್ಸ್ playing 11  

1 min read
csk-vs-dc-match- delhi capitals Probable XI saaksha tv

csk-vs-dc-match- delhi capitals Probable XI saaksha tv

DC vs PBKS match | ಡೆಲ್ಲಿ ಕ್ಯಾಪಿಟಲ್ಸ್ playing 11  

15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 32 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಿಷಬ್ ಪಂತ್ ನಾಯಕತ್ವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎದುರಿಸಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದು ಪಂದ್ಯಗಳನ್ನಾಡಿದ್ದು, ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೂರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋಲು ಕಂಡಿವೆ.

ಇದರೊಂದಿಗೆ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಲ್ಲಿ ಏಂಟನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 16 ರನ್ ಗಳಿಂದ ಸೋಲು ಕಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣಿಸಿದ್ರೂ ಸ್ಥಿರ ಪ್ರದರ್ಶನ ಕೊರತೆ ಕಾಣುತ್ತಿದೆ. ಉತ್ತಮ ಆರಂಭ ಸಿಕ್ಕರೂ, ಮಿಡಲ್ ಆರ್ಡರ್ ನಲ್ಲಿ ಬ್ಯಾಟರ್ ಗಳು ತಂಡಕ್ಕೆ ನೆರವಾಗುತ್ತಿಲ್ಲ.

ಆರಂಭಿಕರಾಗಿ ಡೇವಿಡ್ ವಾರ್ನರ್, ಪೃಥ್ವಿ ಶಾ ಆರಂಭದಲ್ಲಿ ಅಬ್ಬರಿಸುತ್ತಿದ್ದಾರೆ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.

ಕೆಳಕ್ರಮಾಂಕದಲ್ಲಿ ಅಕ್ಷರ್ ಪಟೇಲ್, ಶರ್ದೂಲ್ ಠಾಕೂರ್ ತಂಡಕ್ಕೆ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ ಒಬ್ಬರೇ ತಂಡಕ್ಕೆ ನೆರವಾಗುತ್ತಿದ್ದಾರೆ.

DC vs PBKS match | Delhi Capitals playing 11 saaksha tv

ಇಂದಿನ ಪಂದ್ಯದಲ್ಲಿ ಒಂದಿಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಇಂದಿನ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮೆನ್ ಯಶ್ ಧೂಲ್ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಅದೇ ರೀತಿ ಕಳಪೆ ಪ್ರದರ್ಶನ ನೀಡುತ್ತಿರುವ ರೊವ್ಮನ್ ಪಾವೆಲ್ ಬದಲು ಟಿಮ್ ಸಫೆರ್ಟ್ ಸ್ಥಾನ ಗಿಟ್ಟಿಸಿಕೊಳ್ಳಬಹುದು.

ಅದೇ ರೀತಿ ವೇಗಿ ಮುಷ್ತಾಫಿಝುರ್ ರಹಮಾನ್ ಜಾಗದಲ್ಲಿ ಲುಂಗಿ ಎನ್ ಗಿಡಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.

ಇನ್ನೊಂದೆಡೆ ಖಲೀಲ್ ಅಹಮ್ಮದ್ ಸ್ಥಾನವೂ ಗ್ಯಾರಂಟಿ ಇಲ್ಲ. ಖಲೀಲ್ ಸ್ಥಾನದಲ್ಲಿ ಚೇತನ್ ಸಕಾರಿಯಾ ಆಡಿದ್ರೂ ಅಚ್ಚರಿ ಏನಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

 ಡೇವಿಡ್ ವಾರ್ನರ್

ಪೃಥ್ವಿ ಶಾ

ಯಶ್ ಧೂಳ್

ರಿಷಬ್ ಪಂತ್

ಟಿಮ್ ಸೆಫರ್ಟ್

ಲಲಿತ್ ಯಾದವ್

ಅಕ್ಷರ್ ಪಟೇಲ್

ಶಾರ್ದೂಲ್ ಥಾಕೂರ್

ಕುಲದೀಪ್ ಯಾದವ್

ಖಲೀಲ್ ಅಹಮ್ಮದ್ /ಚೇತನ್ ಸಕಾರಿಯಾ 

ಲುಂಗಿ ಎನ್ ಗಿಡಿ DC vs PBKS match | Delhi Capitals playing 11

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd