TUMKUR ಉಸಿರಾಡಿದ ಮೃತ ವ್ಯಕ್ತಿ : ಜನರು ಕಕ್ಕಾಬಿಕ್ಕಿ
ತುಮಕೂರು : ಮೃತಪಟ್ಟಿದ್ದ ವ್ಯಕ್ತಿಯ ದೇಹದಿಂದ ಉಸಿರು ಹೊರಬಂದ ಹಿನ್ನೆಲೆಯಲ್ಲಿ ಗಾಬರಿಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ಕರೆದೋಯ್ದ ವಿಚಿತ್ರ ಘಟನೆ ತುಮಕೂರು ಜಿಲ್ಲೆಯ ಶೆಟ್ಟಿಕೆರೆ ಗ್ರಾಮದಲ್ಲಿ ನಡೆದಿದೆ.
40 ವರ್ಷದ ಹನುಮಂತಯ್ಯ ಸೋಮವಾರ ರಾತ್ರಿ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಚಿಕ್ಕಕೆರೆ ಏರಿ ಬಳಿ ಕುಸಿದು ಬಿದ್ದಿದ್ದರು. ಮಂಗಳವಾರ ಅದೇ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಅದಾಗಲೇ ಹನುಮಂತಯ್ಯ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ನಂತರ ಸಂಬಂಧಿಕರಿಗೆ ಮಾಹಿತಿ ತಿಳಿದು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ. ಅದರ ಭಾಗವಾಗಿ ಮೃತ ದೇಹವನ್ನ ನೀರಿನಿಂದ ತೊಳೆಯುವಾಗ ದೇಹದಿಂದ ಉಸಿರು ಹೊರ ಬಂದಿರುವ ಅನುಭವವಾಗಿದೆ. ಇದನ್ನ ಗಮನಿಸಿದ ಹನುಮಂತಯ್ಯ ಇನ್ನೂ ಬದುಕಿದ್ದಾರೆ ಎಂದು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ಮತ್ತೊಮ್ಮೆ ಖಚಿತಪಡಿಸಿ
ಶವಕ್ಕೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ಹೃದಯದಲ್ಲಿದ್ದ ಉಸಿರು ಹೊರ ಬಂದಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.