ಮೃತಪಟ್ಟಿರುವುದಾಗಿ ಭಾವಿಸಿದ ವ್ಯಕ್ತಿ ಅಂತಿಮ ವಿಧಿ ನಡೆಸಿದ 10 ದಿನಗಳ ನಂತರ ಪ್ರತ್ಯಕ್ಷ !
ಬೆಳ್ತಂಗಡಿ, ಫೆಬ್ರವರಿ19: ಮೃತಪಟ್ಟಿರುವುದಾಗಿ ಭಾವಿಸಿದ ವ್ಯಕ್ತಿಯು ತನ್ನ ಅಂತಿಮ ವಿಧಿಗಳನ್ನು ನಡೆಸಿದ 10 ದಿನಗಳ ನಂತರ ಪ್ರತ್ಯಕ್ಷನಾದ ಘಟನೆ ಇತ್ತೀಚೆಗೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆದಿದೆ.
ಶ್ರೀನಿವಾಸ್ ದೇವಾಡಿಗ (60) ಅವರು ತಮ್ಮ ಮನೆಯಿಂದ ಜನವರಿ 26 ರಂದು ನಾಪತ್ತೆಯಾಗಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅವರು ಕಾಣೆಯಾದ ಪ್ರಕರಣ ದಾಖಲಾಗಿತ್ತು. ಫೆಬ್ರವರಿ 3 ರಂದು ಕುಲ್ಲುಂಜೆ ಕೆರೆಯಲ್ಲಿ ಶವವೊಂದು ಪತ್ತೆಯಾಗಿದೆ. ಕುಟುಂಬ ಸದಸ್ಯರು ಆ ಶವವನ್ನು ನಾಪತ್ತೆಯಾಗಿದ್ದ ದೇವಾಡಿಗ ಎಂದು ಗುರುತಿಸಿದ್ದರು ಮತ್ತು ಅವರ ಅಂತಿಮ ವಿಧಿಗಳನ್ನು ಮಾಡಿದರು.
ಕುಟುಂಬ ಸದಸ್ಯರು 13 ನೇ ದಿನದ ಆಚರಣೆಗೆ ತಯಾರಿ ನಡೆಸುತ್ತಿರುವಾಗ, ಶ್ರೀನಿವಾಸ್ ಅವರು ಮಂಗಳೂರಿನಲ್ಲಿ ಇರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ.
ಕುಟುಂಬ ಸದಸ್ಯರು ಮಂಗಳೂರಿಗೆ ಧಾವಿಸಿ ಅವರನ್ನು ಪತ್ತೆ ಹಚ್ಚಿದರು. ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರುಪಡಿಸಿದ ನಂತರ ಅವರನ್ನು ಅವರ ಮನೆಗೆ ಕರೆದೊಯ್ಯಲಾಯಿತು.
ಈಗ, ಕೆರೆಯಲ್ಲಿ ಪತ್ತೆಯಾದ ಶವದ ಗುರುತನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತ್ಯಾಜ್ಯಗಳಿಂದ ತುಂಬಿದ ಪ್ರದೇಶ ಈಗ ಸುಂದರವಾದ ಉದ್ಯಾನವನ !
https://twitter.com/SaakshaTv/status/1361872160071897093?s=19
https://twitter.com/SaakshaTv/status/1361470984075763712?s=19