ನವದೆಹಲಿ: 8 ಜನ ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ ವಿಧಿಸಿರುವುದರ ವಿರುದ್ಧ ಭಾರತ ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯ ಸ್ವೀಕರಿಸಿದೆ.
ಗೂಢಾಚಾರದ ಆರೋಪದ ಮೇಲೆ ಮರಣದಂಡನೆ ವಿಧಿಸುವುದರ ವಿರುದ್ಧ ಭಾರತ (India) ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯನ್ನು ಕತಾರ್ ನ್ಯಾಯಾಲಯ ಪರಿಶೀಲಿಸಿದ ನಂತರ ವಿಚಾರಣೆಯ ದಿನಾಂಕ ನಿಗದಿ ಪಡಿಸಿದೆ ಎನ್ನಲಾಗಿದೆ.
ಗೂಢಾಚಾರಿಕೆ ಆರೋಪದ ಹಿನ್ನೆಲೆಯಲ್ಲಿ ಕತಾರ್‌ನ ಗುಪ್ತಚರ ಸಂಸ್ಥೆಯು 2022ರಲ್ಲಿ 8 ಮಾಜಿ ಸಿಬ್ಬಂದಿಯನ್ನು ಬಂಧಿಸಿತ್ತು. ಕತಾರ್‌ನ ಅಧಿಕಾರಿಗಳು ಅವರ ವಿರುದ್ಧದ ಆರೋಪಗಳನ್ನು ಬಹಿರಂಗಪಡಿಸಿಲ್ಲ. ವಿರುದ್ಧದ ತೀರ್ಪನ್ನು ಕತಾರ್‌ನ ಪ್ರಥಮ ನಿದರ್ಶನದ ನ್ಯಾಯಾಲಯವು ಪ್ರಕಟಿಸಿತು.
ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಸಂಜೀವ್ ಗುಪ್ತಾ, ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್ ಮತ್ತು ನಾವಿಕ ರಾಗೇಶ್ ಗೋಪಕುಮಾರ್ ಬಂಧಿತ ಭಾರತೀಯ ನೌಕಾಪಡೆಯ ಮಾಜಿ ಯೋಧರು ಎನ್ನಲಾಗಿದೆ. ಈ ಎಲ್ಲ ಮಾಜಿ ಅಧಿಕಾರಿಗಳು 20 ವರ್ಷಗಳ ವಿಶಿಷ್ಟ ಸೇವಾ ದಾಖಲೆ ಹೊಂದಿದ್ದರು.