ಪಂಜಾಬಿ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಅಪಘಾತದಲ್ಲಿ ನಿಧನ…
2021 ರ ಗಣರಾಜ್ಯೋತ್ಸವದಂದು ನಡೆದ ರೈತ ಪ್ರತಿಭಟನೆ ವೇಳೆ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ನಂತರ ಬೆಳಕಿಗೆ ಬಂದಿದ್ದ ಪಂಜಾಬಿ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಮಂಗಳವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೆಂಪುಕೊಟೆಯ ಮೇಲೆ ಸಿಖ್ ಧ್ವಜ ಹಾರಿಸುವ ಸಂಚಿನ ಮೇಲೆ ನಟ ದೀಪ್ ಸಿಧು ಅವರನ್ನ ಎರಡು ಭಾರಿ ಬಂಧಿಸಲಾಗಿತ್ತು. ದೆಹಲಿ ಬೈಪಾಸ್ ರಸ್ತೆಯ ಕುಂಡ್ಲಿ ಮನೇಸರ್ ಪಲ್ವಾಲ್ ಎಕ್ಸ್ ಪ್ರೆಸ್ ವೇ ಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯದಲ್ಲಿ ಟ್ರಕ್ ನ ಹಿಂಭಾಗಕ್ಕೆ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪೀಯೋ ಡಿಕ್ಕಿ ಹೊಡೆದಿರುವುದು ಕಾಣಬಹುದು. ದೀಪ್ ಸಿಧು ಅವರು ನಟಿ ಮತ್ತು ಸ್ನೇಹಿತೆ ರೀನಾ ರೈ ಅವರೊಂದಿಗೆ ದೆಹಲಿಯಿಂದ ಬಟಿಂಡಾಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
Another visual of Deep Sidhu's scorpio after an unfortunate accident. pic.twitter.com/TmZpmY16p8
— Utkarsh Singh (@UtkarshSingh_) February 15, 2022
ದೀಪ್ ಸಿಧು ಅವರ ಕುಟುಂಬಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಸಾಂತ್ವನ ಹೇಳಿದ್ದಾರೆ. “ಖ್ಯಾತ ನಟ ಮತ್ತು ಸಾಮಾಜಿಕ ಕಾರ್ಯಕರ್ತ #ದೀಪ್‌ಸಿಧು ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖತಪ್ತ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ” ಎಂದು ಚನ್ನಿ ಟ್ವೀಟ್ ಮಾಡಿದ್ದಾರೆ.