Kings ಗೆ ಆಘಾತ | ಚಹಾರ್ ದೂರ.. ಇಶಾಂತ್ ಗೆ ಮಣೆ
ಐಪಿಎಲ್-2022 ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಭಾರಿ ಆಘಾತ ಎದುರಾಗಿದೆ.
ತಂಡದ ಸ್ಟಾರ್ ಬೌಲರ್ ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಅರ್ಧದಷ್ಟು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ T20I ಪಂದ್ಯದಲ್ಲಿ ಚಹಾರ್ ಗಾಯಗೊಂಡಿದ್ದರು.
ಅವರು ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಎಂಟು ವಾರಗಳು ವಿಶ್ರಾಂತಿ ಪಡೆಯಬೇಕಾಗಿದೆ.
ದೀಪಕ್ ಚಹಾರ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ ಆಗಲು ಪ್ರಯತ್ನಿಸುತ್ತಿದ್ದಾರೆ.
ಐಪಿಎಲ್-2022 ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹಾರ್ ಅವರನ್ನು 14 ಕೋಟಿ ರೂ.ಗೆ ಖರೀದಿಸಿದೆ. ಐಪಿಎಲ್ 2021ರ ಋತುವಿನಲ್ಲಿ 15 ಪಂದ್ಯಗಳನ್ನು ಆಡಿರುವ ಚಹಾರ್ 14 ವಿಕೆಟ್ ಕಬಳಿಸಿದ್ದಾರೆ.
ಇನ್ನು ಚಹಾರ್ ಸ್ಥಾನಕ್ಕೆ ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಅವರನ್ನು ಫಿಕ್ಸ್ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಕಳೆದ ಋತುವಿನಲ್ಲಿ CSK ಯಶಸ್ಸಿನಲ್ಲಿ ಚಹಾರ್ ಪ್ರಮುಖ ಪಾತ್ರ ವಹಿಸಿದ್ದರು.