dehli
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 58 ವರ್ಷಗಳಲ್ಲೇ ಕನಿಷ್ಠ ಮಟ್ಟದ ತಾಪಮಾನ ದಾಖಲಾಗಿದೆ. ಈ ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಚಳಿ ದಾಖಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಸರಾಸರಿ 17.2 ಡಿ ಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು 58 ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನವಾಗಿದೆ.
ಇನ್ನೂ ಈ ಹಿಂದೆ ಅಂದ್ರೆ 1962ರ ಅಕ್ಟೋಬರ್ನಲ್ಲಿ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 16.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಂತರ 1937ರ ಅ.31ರಂದು 9.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. ಬಳಿಕ 1994ರಲ್ಲಿ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದೀಗ ಅಂದ್ರೆ ಕಳೆದ ಗುರುವಾರ ನಗರದಲ್ಲಿನ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ಗೆ ದಿಢೀರ್ ಕುಸಿತ ಕಂಡಿದೆ. ಇನ್ನೂ ಡಿಸೆಂಬರ್ ಅಷ್ಟರಲ್ಲಿ ಮತ್ತಷ್ಟು ತಾಪಮಾನ ಇಳಿಕೆಯಾಲಿದೆ ಎನ್ನಲಾಗುತ್ತಿದೆ. ಸದ್ಯ ಬಾರೀ ಚಳಿಯಿಂದಾಗಿ ರಾಷ್ಟ್ರ ರಾಜಧಾನಿ ಜನರು ಹೈರಾಣಾಗಿದ್ದಾರೆ. ಅದ್ರಲ್ಲೂ ಇದ್ರಿಂದ ಹೆಚ್ಚು ತೊಂದರೆ ಅನುಭವಿಸುವವರು ರಸ್ತೆಬದಿ ಹಾಗೂ ಜೋಪಡಿಗಲಲ್ಲಿನ ಜನರು.
ಗರಿಷ್ಠ ತಾಪಮಾನ 30.8 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಸಾಮಾನ್ಯ ಕನಿಷ್ಠ ತಾಪಮಾನ 15-16 ಡಿಗ್ರಿ ಸೆಲ್ಸಿಯಸ್ ಇದೆ ಎಂದು ಐಎಂಡಿ ತಿಳಿಸಿದೆ. ಶೀತ ತಾಪಮಾನ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದೆ. ತಣ್ಣನೆಯ ಗಾಳಿ ಬೀಸಿದಷ್ಟೂ ಮಂಜು ಕವಿಯುವುದು ಹೆಚ್ಚುತ್ತಲಿದೆ. ಇನ್ನು ಮುಂದಿನ ಒಂದು ವಾರದಿಂದ 10 ದಿನಗಳ ಕಾಲ ದೆಹಲಿಯಲ್ಲಿ ಕನಿಷ್ಠ ತಾಪಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಕೊರೊನಾ ಹಾವಳಿ ನಡುವೆ ಚಳಿಯಿಂದ ದದೆಹಲಿ ಜನರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ.
dehli
ರಾಷ್ಟ್ರೀಯ ಏಕತೆ ದಿನಾಚರಣೆ – ಫಿಟ್ ಇಂಡಿಯಾ ವಾಕಥಾನ್ ಉದ್ಘಾಟಿಸಿದ ಕ್ರೀಡಾ ಸಚಿವ
ತಂತ್ರಜ್ಞಾನದಿಂದ ಕನ್ನಡ ಬೆಳೆಸೋಣ, ಮುಂದಿನ ವರ್ಷ `ಕನ್ನಡ ಕಾಯಕ ವರ್ಷ’; ಬಿಎಸ್. ಯಡಿಯೂರಪ್ಪ ಘೋಷಣೆ
ಕನ್ನಡ ನಿತ್ಯೋತ್ಸವವಾಗಬೇಕು : ಬಿ.ಸಿ.ಪಾಟೀಲ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel