Delhi earthquake : ದೆಹಲಿ ಸೇರಿದಂತೆ ಐದು ರಾಜ್ಯಗಳಲ್ಲಿ ಭೂಕಂಪನದ ಅನುಭವ – 5.8 ತೀವ್ರತೆ
ದೆಹಲಿ – ಎನ್ ಸಿ ಆರ್ ಸುತ್ತಾಮುತ್ತ ಮಂಗಳವಾರ ಮಧ್ಯಾಹ್ನ 2:28 ಕ್ಕೆ 30 ಸೆಕೆಂಡುಗಳ ಕಾಲ ಪ್ರಬಲ ಭೂಕಂಪ ಉಂಟಾಗಿದೆ. ಭೂಕಂಪದ ಕೇಂದ್ರಬಿಂದು ನೇಪಾಳದ ಕಾಳಿಕಾದಿಂದ 12 ಕಿ.ಮೀ. ದೂರದಲ್ಲಿ ಕಂಡುಬಂದಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.8 ರಷ್ಟು ಕಂಡು ಬಂದಿದೆ.
ದೆಹಲಿ ಹೊರತುಪಡಿಸಿ, ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಹರಿಯಾಣದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನೆರೆಯ ರಾಷ್ಟ್ರ ಚೀನಾದಲ್ಲೂ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಹೊಸ ವರ್ಷದ ಆರಂಭದ ನಂತರದಿಂದ ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸುತ್ತಿರುವ ಮೂರನೇ ಭೂಕಂಪನದ ಅನುಭವ ಇದಾಗಿದೆ.
ಇದಕ್ಕೂ ಮೊದಲು ಜನವರಿ 5 ರಂದು ದೆಹಲಿ-ಎನ್‌ಸಿಆರ್ ಮತ್ತು ಕಾಶ್ಮೀರದಲ್ಲಿ ರಾತ್ರಿ 7:56 ಕ್ಕೆ ಪ್ರಬಲ ಭೂಕಂಪನದ ಅನುಭವವಾಯಿತು. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆಯು 5.9 ಆಗಿತ್ತು. ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ 79 ಕಿಮೀ ದೂರದಲ್ಲಿರುವ ಹಿಂದೂಕುಶ್ ಪ್ರದೇಶ ಇದರ ಕೇಂದ್ರವಾಗಿತ್ತು.
Delhi earthquake : Earthquake experience in five states including Delhi – 5.8 intensity