Delhi Earthquake : ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ ; ನಡುಗಿದ ಉತ್ತರ ಭಾರತ…
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ ಸಂಭವಿಸಿದ್ದು ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.6ರಷ್ಟಿದೆ. ದೆಹಲಿ ಜತೆಗೆ ಉತ್ತರ ಭಾರತದ ಹಲವು ರಾಜ್ಯಗಳೂ ಭೂಕಂಪಕ್ಕೆ ತುತ್ತಾಗಿವೆ.
ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲೂ ಭೂಕಂಪ ಸಂಭವಿಸಿದೆ. ಜನರು ಭಯಭೀತರಾಗಿ ಜೀವ ಭಯದಿಂದ ಮನೆಯಿಂದ ಹೊರಬಿದ್ದು ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. ಕಂಪನದ ರಭಸಕ್ಕೆ ಮನೆಗಳಲ್ಲಿದ್ದ ವಸ್ತುಗಳು ನೆಲಕ್ಕುರುಳಿವೆ.
ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನೋಯ್ಡಾ, ಗಾಜಿಯಾಬಾದ್ ಮತ್ತು ವಸುಂಧರಾ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಆದರೆ, ಪ್ರಾಣಹಾನಿಯಾಗಿದ್ದು, ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ಯಾವುದೇ ವರದಿಯಾಗದಿರುವುದು ಸಂತಸ ತಂದಿದೆ.
ಮಂಗಳವಾರ ರಾತ್ರಿ 10.20ರ ಸುಮಾರಿಗೆ ಭಾರತದಲ್ಲಿ ಭೂಮಿ ಕಂಪಿಸಿದೆ. ಭೂಕಂಪದಿಂದ ಸ್ಥಳೀಯರು ಭಯಭೀತರಾಗಿ ಮನೆ ಬಿಟ್ಟು ರಸ್ತೆಗೆ ಇಳಿದಿದ್ದಾರೆ.
Delhi Earthquake: Earthquakes in the national capital; Trembling North India…