ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ.
ಮೆಗ್ ಲ್ಯಾನಿಂಗ್, ಜೆಮಿಮಾ ರಾಡ್ರಿಗಾಸ್ ಅವರ ಭರ್ಜರಿ ಶತಕದ ನೆರವಿನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ 29 ರನ್ ಗಳ ಜಯ ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್ ಗೆ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲು ಮಾತ್ರ ಯಶಸ್ವಿಯಾಯಿತು. ಡೆಲ್ಲಿ ಪರ ಆರಂಭಿಕರಾಗಿದ್ದ ಮೆಗ್ ಲ್ಯಾನಿಂಗ್ ಅರ್ಧಶತಕ (53 ರನ್, 6 ಫೋರ್, 2 ಸಿಕ್ಸ್) ಬಾರಿಸಿ ಗಮನ ಸೆಳೆದರು. ಜೆಮಿಮಾ ರಾಡ್ರಿಗಾಸ್ ಕೂಡ ಔಟಾಗದೆ (69 ರನ್, 8 ಫೋರ್, 3 ಸಿಕ್ಸ್) ಗಳಿಸಿದರು. ಶಫಾಲಿ ವರ್ಮಾ 28, ಆಲಿಸ್ ಕ್ಯಾಪ್ಸಿ 19, ಮರಿಜಾನ್ನೆ ಕಪ್ 11 ರನ್ ಗಳಿಸಿದರು.
193 ರನ್ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭಿಕ ಆಘಾತ ಎದುರಿಸಿತು. ಅಮನ್ಜೋತ್ ಕೌರ್ (42), ಹೇಲಿ ಮ್ಯಾಥ್ಯೂಸ್ (29), ಸಜೀವನ್ ಸಜನ (24 ರನ್ ಔಟಾಗದೆ) ಬಿಟ್ಟರೆ ಉಳಿದ ಆಟಗಾರರು ಪ್ರತಿರೋಧ ಒಡ್ಡಲಿಲ್ಲ. ಜೆಸ್ ಜೊನಾಸೆನ್ 3 ವಿಕೆಟ್ ಕಿತ್ತು ಮಿಂಚಿದರು. ಸಂಘಟಿತ ಬೌಲಿಂಗ್ ನೆರವಿನಿಂದ ಮುಂಬೈ ವಿರುದ್ಧ ಡೆಲ್ಲಿ ಗೆಲುವು ದಾಖಲಿಸಿತು.