ವೆಲ್ಲಿಂಗ್ಟನ್: ಖ್ಯಾತ ಮಹಿಳಾ ಬಾಡಿ ಬಿಲ್ಡರ್ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದುವ ಬಯಕೆಗೆ ಉಸಿರು ಚೆಲ್ಲಿರುವ ಘಟನೆ ನಡೆದಿದೆ.
5 ಮಕ್ಕಳ ತಾಯಿಯಾಗಿದ್ದ ನ್ಯೂಜಿಲೆಂಡ್ನ (New Zealand) ಬಾಡಿಬಿಲ್ಡರ್ ಮಹಿಳೆ ರೇಚೆಲ್ ಚೇಸ್ (41) (Raechelle Chase) ಸಾವನ್ನಪ್ಪಿದ್ದಾರೆ. ಫೇಸ್ ಬುಕ್ ನಲ್ಲಿ 14 ಲಕ್ಷ ಫಾಲೋವರ್ಸ್ಗಳನ್ನು ಹೊಂದಿದ್ದರು. ಸದ್ಯ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಮಗಳು ಸ್ಪರ್ಶ ತಿಳಿಸಿದ್ದಾರೆ. ಈ ಕುರಿತು ನ್ಯೂಜಿಲೆಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೆಚ್ಚು ಅಭಿಮಾನಿಗಳನ್ನು ಗಳಿಸಬೇಕೆಂಬ ಹುಚ್ಚು ಅವರಿಗಿತ್ತು. ವಿಶ್ವದಾದ್ಯಂತ ಲಕ್ಷಾಂತರ ಜನರು ನನ್ನ ಅಮ್ಮನನ್ನೇ ಪ್ರೇರಣೆಯಾಗಿ ಮಾಡಿಕೊಂಡಿದ್ದರು. ಅಮ್ಮನನ್ನು ಕಳೆದುಕೊಂಡಿರುವುದು ತುಂಬಾ ದುಃಖವಾಗುತ್ತಿದೆ. ಅವರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ ಎಂದು ಅವರ ಮಗಳು ಹೇಳಿದ್ದಾರೆ.
ರೇಚೆಲ್ ಚೇಸ್, ಕ್ರಿಸ್ ಚೇಸ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಪತಿ ಕ್ರಿಸ್ ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, 10 ವರ್ಷಗಳ ಕಾಲ ಜೈಲಿನಲ್ಲಿದ್ದ. ಹೀಗಾಗಿ ಅವರು ಡಿವೋರ್ಸ್ ಪಡೆದಿದ್ದರು ಎನ್ನಲಾಗಿದೆ.