ಡಿವೋರ್ಸ್ ಬೆನ್ನಲ್ಲೇ ‘ಪುಷ್ಪ’ ನಿರ್ದೇಶಕನ ಜೊತೆ ಹೊಸ ಸಿನಿಮಾಗೆ ಸಹಿ ಹಾಕಿದ ‘ಅಸುರನ್’..!!!

1 min read

ಡಿವೋರ್ಸ್ ಬೆನ್ನಲ್ಲೇ ‘ಪುಷ್ಪ’ ನಿರ್ದೇಶಕನ ಜೊತೆ ಹೊಸ ಸಿನಿಮಾಗೆ ಸಹಿ ಹಾಕಿದ ‘ಅಸುರನ್’..!!!

ತಮಿಳಿನ ಸ್ಟಾರ್ ನಟ ಡಿಸೋರ್ವ್ ಟೆನ್ಷನ್ ನಡುವೆಯೂ ‘ಪುಷ್ಪ’ ನಿರ್ದೇಶಕ ಸುಕುಮಾ್ ಜೊತೆಗೆ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ.. ಪುಷ್ಪ ಭಾಗ -1 ಸಕ್ಸಸ್ ಕಂಡ ನಂತರ ಸುಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.. ಒಂದೆಡೆ ಪುಷ್ಪ 2 , ಮತ್ತೊಂದೆಡೆ ವಿಜಯ್ ದೇವರಕೊಂಡ ಜೊತೆಗೆ ಹೊಸ ಸಿನಿಮಾ , ಬಾಲಿವುಡ್ ನ ಅಕ್ಷಯ್ ಕುಮಾರ್ ಅವರಿಂದ ಡೈರೆಕ್ಷನ್ ನ ಆಫರ್.. ಈ ನಡುವೆ ತಮಿಳಿನ ಸ್ಟಾರ್ ನಟ ಧನುಷ್ ಜೊತೆಗೆ ಹೊಸ ಸಿನಿಮಾಗೆ ಮುಂದಾಗಿದ್ದು , ಧನುಷ್ ತಮ್ಮ ಖಾಸಗಿ ಜೀವನದಲ್ಲಿ ಎದ್ದಿರುವ ಬಿರುಗಾಳಿಯ ಚಿಂತೆ ಬಿಟ್ಟು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ..

ಮದುವೆಯ ಹೈಲೇಟ್ ವಿಡಿಯೋ ಶೇರ್ ಮಾಡಿದ ಶುಭಾ ಪುಂಜಾ

ಹೌದು.. ರಜನಿಕಾಂತ್ ಮೊದಲ ಮಗಳ ಜೊತೆಗಿನ 18 ವರ್ಷಗಳ ದಾಂಪತ್ಯಕ್ಕೆ ಧನುಶ್ ಇತಿಶ್ರೀ ಹಾಡಿದ್ದಾರೆ.. ಈ ನಡುವೆ ಸಾಲು ಸಾಲು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.. ಸರ್ , ಮಾರನ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಇದೀಗ ಸುಕುಮಾರ್ ಜೊತೆಗೆ ಧನುಷ್ ಹೊಸ ಸಿನಿಮಾಗೆ ಸಹಿ ಹಾಕಿರುವುದು ಅವರ ಅಭಿಮಾನಿಗಳಲ್ಲಿರುವ ಡಿವೋರ್ಸ್ ಬೇಸರವನ್ನ ಕೊಂಚ ತಗ್ಗಿಸಿದೆ. ಮಾಸ್ ಸಿನಿಮಾಗಳ ಸರದಾರ ಧನುಷ್ , ಮಾಸ್ ಸಿನಿಮಾಗಳ ಜೊತೆಗೆ ಕಂಟೆಂಟ್ ಗೆ ಮೋಸ ಮಾಡದೇ ಸಿನಿಮಾ ಮಾಡುವ ಕಲೆಗಾರ ಸುಕುಮಾರ್…

ಹೀಗಾಗಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾ ಹೇಗಿರಲಿದೆ.. ಕಥೆ ಹೇಗಿರಲಿದೆ..ಪ್ಯಾನ್ ಇಂಡಿಯಾ ಆಗಿರಲಿದ್ಯಾ ಅನ್ನುವ ಕ್ಯೂರಿಯಾಸಿಟಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಮನೆ ಮಾಡಿದೆ.. ಆದ್ರೆ ಅಧಿಕೃತವಾಗಿ ಘೋಷಣೆಯಾಗಿಲ್ಲ.. ಆದ್ರೆ ಇನ್ನೂ ಕೆಲವೇ ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd