ಸ್ಟಾರ್ ನಿರ್ದೇಶಕನನ್ನ ಗುಟ್ಟಾಗಿ ಮದುವೆಯಾದ ನಟಿ ಧನ್ಯ ಬಾಲಕೃಷ್ಣ….
ಮೂಲತಃ ಕನ್ನಡದವರಾಗಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮಿಂಚಿರುವ ನಟಿ ಧನ್ಯ ಬಾಲಕೃಷ್ಣ ತಮಿಳಿನ ಸ್ಟಾರ್ ಡೈರೆಕ್ಟರ್ ಬಾಲಾಜಿ ಮೋಹನ್ ಅವರನ್ನ ಗುಟ್ಟಾಗಿ ಮದುವೆಯಾಗಿರುವುದಾಗಿ ವರದಿಯಾಗಿದೆ.
ಕನ್ನಡದಲ್ಲಿ ಸಾರ್ವಜನಿಕರಿಗೆ ಸುವರ್ಣವಕಾಶ ಮತ್ತು ನೋಡಿ ಸ್ವಾಮಿ ನಾವಿರೋದು ಹೀಗೆ ಎಂಬ ಚಿತ್ರಗಳಲ್ಲಿ ನಟಿಸಿರುವ ನಟಿ ಧನ್ಯ ಬಾಲಕೃಷ್ಣ 7 ಸೆನ್ಸ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಮಣೆ ಮಾಡಿದ್ದರು. ತೆಲುಗಿನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿರುವ ಧನ್ಯ ‘ಸೀತಮ್ಮವಾಕಿತ್ಲೋ ಸಿರಿಮಲ್ಲೆಚೆಟ್ಟು’, ‘ರಾಜು ಗಾರಿ ಗಧಿ’, ‘ನೇನು ಶೈಲಜಾ’ ಚಿತ್ರಗಳ ಮೂಲಕ ಉತ್ತಮ ಮನ್ನಣೆ ಗಳಿಸಿದ್ದಾರೆ.
ಇದೀಗ ನಟಿ ಧನ್ಯ ಬಾಲಕೃಷ್ಣ ತಮಿಳಿನ ಸ್ಟಾರ್ ಡೈರೆಕ್ಟರ್ ಬಾಲಾಜಿ ಮೋಹನ್ ನನ್ನು ಗುಟ್ಟಾಗಿ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಧನುಷ್ ನಟನೆಯ ಮಾರಿ-1 ಮತ್ತು ಮಾರಿ-2 ಸಿನಿಮಾ ಸಿನಿಮಾದ ನಿರ್ದೇಶಕ ಬಾಲಾಜಿ ಮೋಹನ್ ವಿವಾಹವನ್ನ ಖಚಿತಪಡಿಸಿದ್ದಾರೆ. ಬಾಲಾಜಿ ಮೋಹನ್ ನಿರ್ದೆಶನದ ಲವ್ ಫೇಲ್ಯೂರ್ ಸಿನಿಮಾ ಚಿತ್ರೀಕರಣದ ವೇಳೆ ನಟಿಯ ಪರಿಚಯವಾಗಿತ್ತು ಎಂದು ತಿಳಿದು ಬಂದಿದೆ.
Dhanya Balakrishna: Actress Dhanya Balakrishna secretly married the star director.