ಧಾರವಾಡ ನೀರಾವರಿ ಇಲಾಖೆಯ ಮೇಲೆ ರೈತರು ಭ್ರಷ್ಟಾಚಾರ ಆರೋಪ , ಎರಡನೇ ದಿನಕ್ಕೆ ಕಾಲಿಟ್ಟ ಧರಣಿ
1 min read
ಧಾರವಾಡ : ಧಾರವಾಡ ನೀರಾವರಿ ಇಲಾಖೆಯ ಮೇಲೆ ರೈತರು ಭ್ರಷ್ಟಾಚಾರ ಆರೋಪ ಮಾಡಿ ನಡೆಸುತ್ತಿರುವ ಧರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ..
ಧಾರವಾಡ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ಮುಂದುವರಿದಿದೆ.. ಕಳಸಾ ಬಂಡೂರಿ ಹೋರಾಟ ಸಮಿತಿಯ ರೈತರಿಂದ ಧರಣಿ ನಡೆಯುತ್ತಿದೆ..
ಈ ಇಲಾಖೆ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ , ಹೀಗಾಗಿಯೇ ಕಳಸಾ ಬಂಡೂರಿ ನಾಲಾ ಯೋಜನೆ ವಿಫಲವಾಗುತ್ತಿದೆ , ಈಗಾಗಲೇ ಯೋಜನೆಗೆ ಅನುಮೋದನೆ ಸಿಕ್ಕರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ..
ನೀರಾವರಿ ಕಚೇರಿ ಎದುರು ರೈತರ 2ನೇ ದಿನದ ಪ್ರತಿಭಟನೆ ಬೆಳಿಗ್ಗೆ ಆರಂಭವಾಗಿದೆ.. ಮಹಿಳಾ ರೈತ ಮುಖಂಡರು ರಂಗೋಲಿ ಬಿಡಿಸುವ ಮೂಲಕ ಪ್ರತಿಭಟಿಸಿದ್ದಾರೆ..
ನೀರಾವರಿ ಇಲಾಖೆಯ ಭ್ರಷ್ಟಾಚಾರ ಬಯಲಿಗೆಳೆಯಲು ಸಿಬಿಐ ತನಿಖೆಗೆ ವಹಿಸುವಂತೆ ರೈತರು ಒತ್ತಾಯಿಸಿದ್ದಾರೆ..