ಧಾರವಾಡದ ಎಮ್ಮೆ ತಳಿಗೆ ರಾಷ್ಟ್ರೀಯ ಮಾನ್ಯತೆ…!

1 min read

ಧಾರವಾಡದ ಎಮ್ಮೆ ತಳಿಗೆ ರಾಷ್ಟ್ರೀಯ ಮಾನ್ಯತೆ…!

ಧಾರವಾಡದ ಎಮ್ಮೆ ತಳಿಗೆ ಇದೀಗ ರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಹೌದು ದೇಶದಲ್ಲಿ ಗುರುತಿಸಲಾಗಿರುವ ಎಮ್ಮೆ ತಳಿಗಳ ಪೈಕಿ ಧಾರವಾಡದ ತಳಿ 18ನೇ ತಳಿಯಾಗಿ ಸೇರಿಕೊಂಡಿದ್ದು , ದಾರವಾಡದ, ರಾಜ್ಯದ  ಹಿರಿಮೆ ಹೆಚ್ಚಿಸಿದೆ.

ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ಪಶುವಿಭಾಗವು ಕರ್ನಾಟಕದ ಎಮ್ಮೆ ಧಾರವಾಡಿ ತಳಿ ಗೆ ಇಂಡಿಯ ಬಫೆಲೋ 0800 ಧಾರವಾಡಿ 01018 ಎಂದು ತಳಿ ಪ್ರವೇಶ ಸಂಖ್ಯೆ ನೀಡಿದೆ.

ಈ ಮೂಲಕ ಎಮ್ಮೆಗಳಲ್ಲಿ ಮಾನ್ಯತೆ ಪಡೆದ ರಾಜ್ಯದ ಮೊದಲ ತಳಿ ಇದಾಗಿದೆ.

ರಾಜ್ಯದಲ್ಲಿ ಹೆಚ್ಚಾಯ್ತು ಡೆಂಘಿ , ಚಿಕನ್ ಗುನ್ಯ ಪ್ರಕರಣಗಳು..!

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಪಶುವಿಜ್ಞಾನ ವಿಭಾಗ 1970 ರಿಂದ ಮಾನ್ಯತೆ ಪಡೆಯಲು ಪ್ರಯತ್ನಸುತ್ತಿತ್ತು, 2017 ರಲ್ಲಿ ವರದಿ ಸಲ್ಲಿಸಿತ್ತು. ಇದೀಗ ಆ ಪ್ರಯತ್ನ ಫಲಿಸಿದೆ.

ಧಾರವಾಡದ ಈ ತಳಿಯ ಎಮ್ಮೆಗಳು ಕರ್ನಾಟಕದ ಉತ್ತರ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ತಳಿ ಕಾಣಿಸುತ್ತದೆ. ಇನ್ನೂ ಸುಮಾರು 12.05 ಲಕ್ಷ ಧಾರವಾಡದ ತಳಿ ಎಮ್ಮೆಗಳಿವೆ.

ಈ ತಳಿ ತನ್ನ ಜೀವಿತಾವಧಿಯಲ್ಲಿ ಐದು ಬಾರಿ ಕರು ಹಾಕುತ್ತದೆ. ಒಮ್ಮೆ ಕರು ಹಾಕಿದರೆ 335 ದಿನ ಹಾಲು ನೀಡುತ್ತದೆ ಮತ್ತು ಇದರ ಹಾಲಿನಲ್ಲಿ 7% ರಷ್ಟು ಕೊಬ್ಬಿನಾಂಶ ಇದೆ.

ಹೆಚ್ಚು ಕೊಬ್ಬಿನಾಂಶದ ಹಾಲಿನ ಕಾರನ ಸಿಹಿ ತಿನಿಸುಗಳಿಗೆ ಈ ಎಮ್ಮೆ ಹಾಲನ್ನು ಬಳಸಲಾಗುತ್ತದೆ. ಇನ್ನೂ ನಾನಾ ರೀತಿಯಾದ ವಿಶೇಷತೆಗಳಿಂದಾಗಿ ಈ ಎಮ್ಮೆ ತಳಿ ಇದೀಗ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದೆ.

ಕೊರೊನಾ ಮಧ್ಯೆ ರಾಜ್ಯದಲ್ಲಿ ಗಣೇಶ ಹಬ್ಬ ಆಚರಣೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd