ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬಾಗಲಕೋಟೆ (DHFWS Bagalkot) 2025ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, 131 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ನೇಮಕಾತಿ ವಿವರ :
ಸಂಸ್ಥೆ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS), ಬಾಗಲಕೋಟೆ
ಒಟ್ಟು ಹುದ್ದೆಗಳು : 131
ಉದ್ಯೋಗ ಸ್ಥಳ : ಬಾಗಲಕೋಟೆ, ಕರ್ನಾಟಕ
ಹುದ್ದೆಗಳ ಹೆಸರು : ವೈದ್ಯಕೀಯ ಅಧಿಕಾರಿ, ನರ್ಸ್, ತಾಂತ್ರಿಕ ಸಹಾಯಕರು, ಸಲಹೆಗಾರರು ಮತ್ತಿತರ
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್
ಶೈಕ್ಷಣಿಕ ವಿದ್ಯಾರ್ಹತೆ :
ವೈದ್ಯಕೀಯ ಅಧಿಕಾರಿ (ಎಂಬಿಬಿಎಸ್) ಹುದ್ದೆಗಳಿಗೆ ಅಭ್ಯರ್ಥಿಗಳು ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರಬೇಕು.
ವೈದ್ಯಕೀಯ ಅಧಿಕಾರಿ (RBSK-BAMS) ಹುದ್ದೆಗಳಿಗೆ ಅಭ್ಯರ್ಥಿಗಳು BAMS ವಿದ್ಯಾರ್ಹತೆ ಹೊಂದಿರಬೇಕು.
ಸ್ಟಾಫ್ ನರ್ಸ್ (B.Sc/GNM) ಹುದ್ದೆಗಳಿಗೆ ಅಭ್ಯರ್ಥಿಗಳು B.Sc ನರ್ಸಿಂಗ್ / GNM ವಿದ್ಯಾರ್ಹತೆ ಹೊಂದಿರಬೇಕು.
ಲ್ಯಾಬ್ ತಂತ್ರಜ್ಞರು ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ, 12ನೇ, DMLT ವಿದ್ಯಾರ್ಹತೆ ಹೊಂದಿರಬೇಕು.
ಜೂನಿಯರ್ ಹೆಲ್ತ್ ಅಸಿಸ್ಟಂಟ್ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ, 12ನೇ, ಡಿಪ್ಲೋಮಾ ಕೌನ್ಸೆಲರ್, ಫಿಸಿಯೊಥೆರಪಿಸ್ಟ್, ಇಂಜಿನಿಯರ್, ಸಲಹೆಗಾರರು, ಪೀಡಿಯಾಟ್ರಿಷಿಯನ್, ಇತ್ಯಾದಿ : ಸಂಬಂಧಪಟ್ಟ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ
ಅಭ್ಯರ್ಥಿಗಳಿಗೆ ಹುದ್ದೆಯ ಪ್ರಕಾರ ಗರಿಷ್ಠ ವಯಸ್ಸು 35 ರಿಂದ 65 ವರ್ಷಗಳವರೆಗೆ.
ವಯೋಮಿತಿ ಸಡಿಲಿಕೆ :
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: 3 ವರ್ಷ
ಎಸ್ಸಿ/ಎಸ್ಟಿ/ಪ್ರವರ್ಗ-I ಅಭ್ಯರ್ಥಿಗಳಿಗೆ: 5 ವರ್ಷ
ಮಾಸಿಕ ವೇತನ
ವೈದ್ಯಕೀಯ ಅಧಿಕಾರಿ : ರೂ.75,000/-
ಕೌನ್ಸೆಲರ್, ಫಿಸಿಯೊಥೆರಪಿಸ್ಟ್ : ರೂ.14,558/- ರಿಂದ ರೂ.30,000/-
ಸ್ಟಾಫ್ ನರ್ಸ್ (GNM/B.Sc) : ರೂ.14,187/-
ಲ್ಯಾಬ್ ತಂತ್ರಜ್ಞರು : ರೂ.14,187/-
ಜೂನಿಯರ್ ಹೆಲ್ತ್ ಅಸಿಸ್ಟಂಟ್ : ರೂ.14,044/- ರಿಂದ ರೂ.15,397/-
ಸಲಹೆಗಾರರು : ರೂ.1,40,000/-
ಇಂಜಿನಿಯರ್ (ಸಿವಿಲ್) : ರೂ.25,000/-
ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿಗೆ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ದಿನಾಂಕಗಳು :
ಅರ್ಜಿಯ ಪ್ರಾರಂಭ ದಿನಾಂಕ : 03-ಜೂನ್-2025
ಅಂತಿಮ ದಿನಾಂಕ : 17-ಜೂನ್-2025