ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.
ಐಪಿಎಲ್ ಹಲವಾರು ದಿಗ್ಗಜರನ್ನು ಕಂಡರೂ ಧೋನಿ ಮಾತ್ರ ಶ್ರೇಷ್ಠರಾಗಿ ಉಳಿದಿದ್ದಾರೆ. ಧೋನಿ ಐಪಿಎಲ್ ನಲ್ಲಿ 250 ಪಂದ್ಯಗಳಲ್ಲಿ 135 ಸ್ಟ್ರೈಕ್ ರೇಟ್ನಲ್ಲಿ 5082 ರನ್ ಗಳಿಸಿದ್ದಾರೆ.
ಈ ಋತುವಿನಲ್ಲಿ 335 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ. ಕೊಹ್ಲಿ ನಾಯಕನಾಗಿ ಐಪಿಎಲ್ನಲ್ಲಿ ಐದು ಶತಕ ಮತ್ತು 37 ಅರ್ಧಶತಕ ಗಳಿಸಿ 4994 ರನ್ ಗಳಿಸಿದ್ದಾರೆ.
ಎಂಎಸ್ ಧೋನಿ ನಾಯಕನಾಗಿ 22 ಅರ್ಧಶತಕಗಳು ಸೇರಿದಂತೆ 4660 ರನ್ ಗಳಿಸಿದ್ದಾರೆ. ಧೋನಿ ಇನ್ನೂ 335 ರನ್ ಗಳಿಸಿದರೆ, ನಾಯಕನಾಗಿ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಧೋನಿ ಅಗ್ರರಾಗುತ್ತಾರೆ. ಪ್ರಸಕ್ತ ಸಾಲಿನ ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ಹಾಗೂ ಬೆಂಗಳೂರು ಮಧ್ಯೆ ನಡೆಯಲಿದೆ.