CSK vs KKR ಹಣಾಹಣಿಗೆ ಮುಂಬೈ ವಾಂಖೆಡೆ ಸ್ಟೇಡಿಯಂ ಸಿದ್ಧ

1 min read

CSK vs KKR ಹಣಾಹಣಿಗೆ ಮುಂಬೈ ವಾಂಖೆಡೆ ಸ್ಟೇಡಿಯಂ ಸಿದ್ಧ

ಇಂದಿನಿಂದ ಕ್ರಿಕೆಟ್ ಮಹಾಕುಂಭ ಮೇಳ ಅಂದರೆ ಐಪಿಎಲ್  ಶುರುವಾಗಲಿದೆ. 15 ನೇ ಆವೃತ್ತಿಯ  ಮೊದಲ ಪಂದ್ಯ,  ಕಳೆದ ವರ್ಷದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7:30 ರಿಂದ ನಡೆಯಲಿದೆ. ಪಂದ್ಯಕ್ಕೆ ಎರಡು ದಿನ ಮೊದಲು ಚೆನ್ನೈ ತಂಡದಲ್ಲಿ ಅತಿದೊಡ್ಡ ಬದಲಾವಣೆಯಾಗಿದೆ.  14 ವರ್ಷಗಳಿಂದ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ.  ಅವರ ಬದಲಿಗೆ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೆ ನಾಯಕತ್ವವನ್ನು ಧೋನಿ ಹಸ್ತಾಂತರಿಸಿದ್ದಾರೆ.

ಇನ್ನೂ ಕೋಲ್ಕತ್ತಾ ತಂಡ, ಈ ಬಾರಿ ಹೊಸ ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಫೀಲ್ಡ್ ಗಿಳಿಯಲಿದೆ.  ಕಳೆದ ಋತುವಿನಲ್ಲಿ ಕೊಲ್ಕತ್ತಾ ತಂಡವನ್ನು ಇಂಗ್ಲೆಂಡ್‌ನ ಇಯಾನ್ ಮಾರ್ಗನ್ ನೇತೃತ್ವ ವಹಿಸಿದ್ದರು. ಈ ಬಾರಿ ಇಯಾನ್ ಮಾರ್ಗನ್ ಅನ್ ಸೋಲ್ಡ್ ಆಗಿದ್ದಾರೆ.

ಐಪಿಎಲ್‌ನಲ್ಲಿ ಉಭಯ ತಂಡಗಳ ನಡುವೆ ಇದುವರೆಗೆ 28 ​​ಪಂದ್ಯಗಳು ನಡೆದಿವೆ. ಚೆನ್ನೈ 18ರಲ್ಲಿ ಗೆದ್ದಿದೆ. ಕೋಲ್ಕತ್ತಾ 9 ಪಂದ್ಯಗಳನ್ನು ಗೆದ್ದಿದೆ. 15 ಅಕ್ಟೋಬರ್ 2021 ರಂದು ಎರಡೂ ತಂಡಗಳು ಪರಸ್ಪರರ ವಿರುದ್ಧ ಕೊನೆಯ ಬಾರಿಗೆ ಮೈದಾನಕ್ಕಿಳಿದವು. ಈ ಪಂದ್ಯದಲ್ಲಿ ಚೆನ್ನೈ ತಂಡ 27 ರನ್‌ಗಳ ಜಯ ಸಾಧಿಸಿತು.

ಐಪಿಎಲ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ತಂಡದ ಇಬ್ಬರು ದಿಗ್ಗಜ ಆಟಗಾರರಾದ ದೀಪಕ್ ಚಹಾರ್ ಮತ್ತು ಮೊಯಿನ್ ಅಲಿ ಆಡುತ್ತಿಲ್ಲ. ದೀಪಕ್  ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯಲ್ಲಿ  ಗಾಯಗೊಂಡಿದ್ದರು.  ಮೊಯಿನ್ ಅಲಿ ಅವರ ವೀಸಾ ತಡವಾಗಿದ್ದರಿಂದ ತಂಡವನ್ನ ತಡವಾಗಿ ಸೇರಿಕೊಳ್ಳಲಿದ್ದಾರೆ.

ಕೋಲ್ಕತ್ತಾ ಕುರಿತು ಮಾತನಾಡುವುದಾದರೆ ಅಜಿಂಕ್ಯ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡಬಹುದು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd