ಮಾಜಿ ಸಂಸದ ಧ್ರುವನಾರಾಯಣ್ ಹೃದಯಾಘಾತದಿಂದ ನಿಧನರಾಗಿದ್ದಾರೆ..
ಹೃದಯಗತವಾಗಿ ಆಸ್ಪತ್ರೆಗೆ ಕರೆದು ಹೋಗುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರ ನಿಧನಕ್ಕೆ ಅನೇಕ ರಾಜಕೀಯ ಮುಖಂಡರು ಸಂತಾಪ ಸೂಚಿಸುತ್ತಿದ್ದಾರೆ..
ಅಜಾತ ಶತ್ರುವಂತಲೇ ಕರೆಸಿಕೊಳ್ಳುತ್ತಿದ್ದ ಧ್ರುವ ನಾರಾಯಣ್ ಅವರ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ..
BJP ನಾಯಕ ಪ್ರತಾಪ್ ಸಿಂಹ
ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಸಂತಾಪ ಸೂಚಿಸಿದ್ದಾರೆ..
” ಇಂಥಾ ಒಳ್ಳೆಯ ವ್ಯಕ್ತಿಯನ್ನೂ ಕಿತ್ತುಕೊಂಡೆಯಲ್ಲಾ ದೇವರೇ… ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ..
ರಣದೀಪ್ ಸಿಂಗ್ ಸುರ್ಜೆವಾಲಾ
ಕಾಂಗ್ರೆಸ್ ನಾಯಕರಾದ ಸುರ್ಜೇವಾಲಾ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ..
” ಸದಾ ನಗುಮುಖದ ನಮ್ಮ ಗೆಳೆಯ, ನಮ್ಮ ನಾಯಕ ಮತ್ತು ಕಾಂಗ್ರೆಸ್ ನ ಅತ್ಯಂತ ಸಮರ್ಪಿತ ನಾಯಕರ ಅಗಲಿಕೆಯ ದುಃಖವನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಧ್ರುವನಾರಾಯಣ. ಬಡವರ ಉದ್ದೇಶಕ್ಕಾಗಿ ಸಮರ್ಪಿತ, ದೀನದಲಿತರ ಅತ್ಯಾಸಕ್ತಿಯ ಚಾಂಪಿಯನ್, ನಾವು ನಿನ್ನನ್ನು ಯಾವಾಗಲೂ ಮಿಸ್ ಮಾಡಿಕೊಳ್ತೇವೆ ಸ್ನೇಹಿತ. RIP” ಎಂದು ಬರೆದುಕೊಂಡಿದ್ದಾರೆ..
No words can describe the irrepairable loss of our ever smiling friend, our leader & easily the most dedicated foot soldier of Congress, Sh. Dhruvanarayan.
Dedicated to the cause of poor, an avid champion of downtrodden, we will miss u forever my friend. RIP
ओम् शांति🙏 pic.twitter.com/JTlN9Hrxmz
— Randeep Singh Surjewala (@rssurjewala) March 11, 2023
ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್
ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ..
” ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀಯುತ ಆರ್. ಧ್ರುವನಾರಾಯಣ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ. ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ಸಿಪಾಯಿ ರಾಜಕಾರಣಿಗಳಲ್ಲಿ ಇವರ ಹೆಸರು ಮುಂಚೂಣಿಯಲ್ಲಿತ್ತು. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಅವರ ಕುಟುಂಬಸ್ಥರಿಗೆ ಭಗವಂತ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ನೀಡಲಿ” ಎಂದು ಬರೆದುಕೊಂಡಿದ್ದಾರೆ..
Dhruva Narayan, condolence of political leaders along with Pratap Simha on the death of former MP Dhruva Narayan.