ಮೈಸೂರು: ಸಚಿವ ಜಮೀರ್ ಅಹ್ಮದ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದಕ್ಕೆ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನನ್ನ ಸೊಕ್ಕು ಮುರಿಯುತ್ತೇನೆ. ಗರ್ಭಭಂಗ ಮಾಡುತ್ತೇನೆ ಎಂದು ದೇವೇಗೌಡರು (Devegowda) ಹೇಳಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಜಮೀರ್ ಮತ್ತು ಕುಮಾರಸ್ವಾಮಿ ಥಿಕ್ ಅಂಡ್ ಥ್ಹೀನ್ ಫ್ರೆಂಡ್ಸ್. ಅವರಿಬ್ಬರ ಮಧ್ಯೆ ಏನೇನೋ ಇರುತ್ತದೆ. ಈ ವಿಚಾರಕ್ಕೆ ಜಮೀರ್ ಸ್ಪಷ್ಟನೆ ನೀಡಿದ್ದಾರೆ. ಇವೆಲ್ಲ ಉಪ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಅಬಕಾರಿಯಲ್ಲಿ ಒಂದೇ ಒಂದು ಪೈಸಾ ಭಷ್ಟಾಚಾರ ಮಾಡಿದರೆ ನಾನು ರಾಜಕೀಯ ಬಿಡುತ್ತೇನೆ. ಬಿಜೆಪಿ ಅವಧಿಯಲ್ಲಿನ ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಏನು ಮಾತನಾಡುತ್ತಾರೆ. ಮೊದಲು ದರ ಬಗ್ಗೆ ಮಾತನಾಡಲು ಹೇಳಿ. ಜನರ ಹೆಣದ ಮೇಲೆ ದುಡ್ಡು ಮಾಡಿರುವ ಪಕ್ಷ ಅದು ಎಂದು ಗುಡುಗಿದ್ದಾರೆ.








