ಬೆಂಗಳೂರು: ಡಿಕೆ ಬ್ರದರ್ಸ್ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಸುರೇಶ್‌ಗೆ ವೋಟ್ ಹಾಕದಿದ್ದರೆ ನೀರು ಕೊಡಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಮೂಲಕ ಆರೋಪಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕೊತ್ವಾಲ್ ಬ್ರದರ್ಸ್‌ಗಳ ಗೂಂಡಾಗಿರಿ ಹೆಚ್ಚಾಗುತ್ತಿದೆ. ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣ ಭೀತಿಗೊಳಿಸಿದ್ದರು. ಇಂದು ಅಪಾರ್ಟ್ಮೆಂಟ್ ನಿವಾಸಿಗಳ ಸಭೆ ನಡೆಸಿ ಮತ ಹಾಕದಿದ್ದರೆ ನೀರು ಕೊಡುವುದಿಲ್ಲ. ಹಕ್ಕು ಪತ್ರ ಕೊಡವುದಿಲ್ಲ ಎಂದು ಹೆದರಿಸಿದ್ದಾರೆ ಎಂದು ಆರೋಪಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊತ್ವಾಲ್ ಬ್ರದರ್ಸ್‌ಗಳ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ.
ನಿನ್ನೆ ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು.
ಇಂದು ಅಪಾರ್ಟ್ಮೆಂಟ್ ನಿವಾಸಿಗಳ ಸಭೆ ನಡೆಸಿ ನೀವು @DKSureshINC ಗೆ ವೋಟು ಹಾಕಿಲ್ಲವೆಂದರೆ ನಿಮಗೆ ನೀರು… pic.twitter.com/jlWYm1Cq5G
— BJP Karnataka (@BJP4Karnataka) April 17, 2024
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡುವ ಮೂಲಕ ಡಿಕೆಶಿ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೇ, ರೈತನ ಜಮೀನು ಸುಟ್ಟು ಹಾಕಿದ್ದಾರೆ. ಆನಂತರ ತಮಗೆ ಬೇಕಾದಂತೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.