ಕೋಲ್ಕತ್ತಾ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆಲ್ಲುವುದು ಕೂಡ ಅನುಮಾನ ಎಂದು ಹೇಳುವುದರ ಮೂಲಕ ಕೈಗೆ ಟಾಂಗ್ ಕೊಟ್ಟು, ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಧೈರ್ಯವಿದ್ದರೆ ವಾರಣಾಸಿಯಲ್ಲಿ ಬಿಜೆಪಿ ಸೋಲಿಸುವಂತೆ ಇಂಡಿಯಾ I.N.D.I.A ಒಕ್ಕೂಟದಿಂದ ಹೊರಬಂದ ನಂತರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ 300 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದೆ. ಆದರೆ, ಅದು ಕನಿಷ್ಠ 40 ಸ್ಥಾನಗಳನ್ನು ಕೂಡ ಗೆಲ್ಲುವುದಿಲ್ಲ. ಇಂತಹ ದುರಹಂಕಾರ ಏಕೆ? ಧೈರ್ಯವಿದ್ದರೆ ವಾರಣಾಸಿಯಲ್ಲಿ (Varanasi) ಬಿಜೆಪಿಯನ್ನು ಸೋಲಿಸಿ ನೋಡೋಣ? ಎಂದು ಸವಾಲು ಹಾಕಿದ್ದಾರೆ. ಅಲ್ಲದೇ, ಕಳೆದ ಬಾರಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಕೂಡ ಕಾಂಗ್ರೆಸ್ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿ ತೃಣಮೂಲ ಕಾಂಗ್ರೆಸ್ ಘೋಷಿಸಿದೆ.