RCBಯನ್ಸ್ ಗೆ ಸ್ಪೆಷಲ್ ಮೆಸೇಜ್ ಕೊಟ್ಟ ಡಿಕೆ
ನಾನು ಸಾಕಷ್ಟು ತಂಡಗಳ ಪರ ಆಡಿದ್ದೇನೆ. ಆದ್ರೆ ನನಗೆ ತಿಳಿದ ಮಟ್ಟಿಗೆ ಇಷ್ಟು ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ತಂಡವನ್ನು ನಾವು ನೋಡಿಲ್ಲ. ನಿಮ್ಮಂತಹ ಅಭಿಮಾನಿಗಳನ್ನು ಪಡೆದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಆರ್ ಸಿಬಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಅವರನ್ನ ಆರ್ ಸಿಬಿ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ 5.50 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆಗ ಎಲ್ಲರೂ ಆರ್ ಸಿಬಿ ಅಭಿಮಾನಿಗಳು ಕೊಂಚ ಬೇಸರ ಹೊರಹಾಕಿದರು. ಯಾಕಂದರೇ ದಿನೇಶ್ ಕಾರ್ತಿಕ್ ಫಾರ್ಮ್ ಬಗ್ಗೆ ಎಲ್ಲರಿಗೂ ಅನುಮಾನ ಇತ್ತು. ಅದೇ ರೀತಿ ಈ ಹಿಂದೆ ದಿನೇಶ್ ಆರ್ ಸಿಬಿಯ ಭಾಗವಾಗಿದ್ದಾಗ ಸಾಕಷ್ಟು ನಿರಾಸೆ ಮೂಡಿಸಿದ್ದರು. ಹೀಗಾಗಿ ದಿನೇಶ್ ಕಾರ್ತಿಕ್ ಬಗ್ಗೆ ಆರ್ ಸಿಬಿಯನ್ಸ್ ಗೆ ಕೊಂಚ ಅಸಮಾಧಾನ ಇತ್ತು. ಆದ್ರೆ ಈ ಸೀಸನ್ ನಲ್ಲಿ ದಿನೇಶ್ ಕಾರ್ತಿಕ್ ಎಲ್ಲರ ಮೆಚ್ಚುಗೆ ಪಡೆದರು. ಅವರ ಅದ್ಭುತ ಆಟದೊಂದಿಗೆ ಆರ್ ಬಿಸಿಯನ್ಸ್ ಹೃದಯ ಗೆದ್ದರು.

ಈ ಸೀಸನ್ ನಲ್ಲಿ ದಿನೇಶ್ ಕಾರ್ತಿಕ್ ಆರ್ ಸಿಬಿ ಆಪದ್ಭಾಂದವರಾಗಿದ್ದರು. ಅನೇಕ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಈ ಸೀಸನ್ ನಲ್ಲಿ ಆರ್ ಸಿಬಿ ಪರ 16 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, 55 ರ ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. ಅವರು ಇಡೀ ಟೂರ್ನಿಯಲ್ಲಿ 183.33ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ.
ಹೀಗಾಗಿ ದಿನೇಶ್ ಕಾರ್ತಿಕ್ ಅವರನ್ನ ಆರ್ ಸಿಬಿ ಅಭಿಮಾನಿಗಳು ಮೆಚ್ಚಿಕೊಂಡು ಡಿಕೆ ಸಾಹೇಬ್ ಅಂತಾ ಕರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್, ತಂಡದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
“ನಾನು ಅನೇಕ ತಂಡಗಳ ಭಾಗವಾಗಿದ್ದೇನೆ. ಆದ್ರೆ ಇಂತಹ ದೊಡ್ಡ ಅಭಿಮಾನಿ ಬಳಗವಿರುವ ತಂಡದ ಪರ ಆಡಿಲ್ಲ. ಇಲ್ಲಿ ಸಿಕ್ಕಂತಹ ಚಿಯರ್ಸ್ ನಾನು ಎಲ್ಲಿಯೂ ಪಡೆದಿಲ್ಲ. ಅಭಿಮಾನಿಗಳ ಪ್ರೀತಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ತುಂಬಾ ಧನ್ಯವಾದಗಳು. ನೀವು ತುಂಬು ಹೃದಯದಿಂದ ನನ್ನ ಸ್ವೀಕರಿಸಿದ್ದೀರಿ. ನಾವು ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮ ಮುಖಗಳಲ್ಲಿ ನಗುವನ್ನ ನೋಡಲು ಇಷ್ಟಪಡುತ್ತೇವೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.








