RCB | ತುಂಬಾ ನಿರಾಸೆಯಾಗಿದೆ.. ದಿನೇಶ್ ಬೇಸರ
ನಾನು ತುಂಬಾ ನಿರಾಸೆಗೊಂಡಿದ್ದೇನೆ. ಇಂತಹ ಸೀಸನ್ ನಲ್ಲಿ ನಾವು ಚಾಂಪಿಯನ್ ಆಗಬೇಕಿತ್ತು. ನಾವು ಟೈಟಲ್ ಗೆಲ್ಲಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವು.
ಎಲ್ಲಾ ಆಟಗಾರರು ಟೈಟಾಲ್ ಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದ್ರೆ ಆ ಗುರಿಯನ್ನ ತಲುಪದೇ ಇದ್ದದ್ದು, ತುಂಬಾ ನೋವು ತಂದಿದೆ ಎಂದು ಆರ್ ಸಿಬಿ ತಂಡದ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲಿನ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ಸೋಲಿನ ಬಗ್ಗೆ ಬೇಸರ ಹೊರಹಾಕಿದರು. ಆರ್ ಸಿಬಿಗೆ ಈ ಸೀಸನ್ ಅದ್ಭುತವಾಗಿತ್ತು.
ನಾವು ಒಳ್ಳೆಯ ಕ್ರಿಕೆಟ್ ಆಡಿದ್ದೇವೆ. ನಮ್ಮ ಆಟದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಒತ್ತಡ ಸಂದರ್ಭಗಳನ್ನು ಅದ್ಭುತವಾಗಿ ಎದುರಿಸಿದ್ದೇವೆ.
ಈ ಬಾರಿ ಆರ್ ಸಿಬಿ ತಂಡದ ಕೀ ಪಾಯಿಂಟ್ ಆಗಿದ್ದು, ಯುವ ಆಟಗಾರರ ಪ್ರದರ್ಶನ. ಅವರ ಪ್ರದರ್ಶನ ಇಂಪ್ರೇಸ್ಸಿವ್ ಆಗಿತ್ತು. ಅವರ ಪ್ರೋಗ್ರಸ್ ನೋಡಿ ಖುಷಿಯಾಗುತ್ತಿದೆ ಎಂದು ದಿನೇಶ್ ತಿಳಿಸಿದ್ದಾರೆ.

ಅಂದಹಾಗೆ ಈ ಸೀಸನ್ ನಲ್ಲಿ ದಿನೇಶ್ ಕಾರ್ತಿಕ್ ಆರ್ ಸಿಬಿ ಆಪದ್ಭಾಂದವರಾಗಿದ್ದರು. ಅನೇಕ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಈ ಸೀಸನ್ ನಲ್ಲಿ ಆರ್ ಸಿಬಿ ಪರ 16 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, 55 ರ ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. ಅವರು ಇಡೀ ಟೂರ್ನಿಯಲ್ಲಿ 183.33ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ.








