Karthik-Dipika | ಪತಿ ಐಪಿಎಲ್ ನಲ್ಲಿ ಬೊಂಬಾಟ್… ಭಾರತಕ್ಕೆ ಚಿನ್ನ ತಂದ ಪತ್ನಿ
1 min read
Karthik-Dipika | ಪತಿ ಐಪಿಎಲ್ ನಲ್ಲಿ ಬೊಂಬಾಟ್… ಭಾರತಕ್ಕೆ ಚಿನ್ನ ತಂದ ಪತ್ನಿ
RCB ತಂಡದ ಆಟಗಾರ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಬೊಂಬಾಟ್ ಆಟವಾಡಿ ತಂಡಕ್ಕೆ ಗೆಲುವುಗಳನ್ನ ತಂದುಕೊಡುತ್ತಿದ್ದಾರೆ.
ನಾಲ್ಕೂ ಪಂದ್ಯಗಳಲ್ಲೂ ದಿನೇಶ್ ಔಟ್ ಆಗದೇ ಇರೋದು ಮತ್ತೊಂದು ವಿಶೇಷ. ಏತನ್ಮಧ್ಯೆ, ಅವರ ಪತ್ನಿ, ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು WSF (ವರ್ಲ್ಡ್ ಸ್ಕ್ವಾಷ್ ಫೆಡರೇಶನ್) ವಿಶ್ವ ಡಬಲ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಡಬ್ಲ್ಯುಎಸ್ಎಫ್ ಮಿಕ್ಸಡ್ ಡಬಲ್ಸ್ನಲ್ಲಿ ಸೌರವ್ ಗೋಶಾಲ್ ಅವರೊಂದಿಗೆ ದೀಪಿಕಾ ಪಳ್ಳಿಕಲ್ ಕಾರ್ತಿಕ್ ಅವರು ಇಂಗ್ಲೆಂಡ್ನ ಆಡ್ರಿಯನ್ ವಾಲರ್ ಮತ್ತು ಆಲಿಸನ್ ವಾಟರ್ಸ್ ಅವರನ್ನು 11-6, 11-8 ರಿಂದ ಸೋಲಿಸಿ ಶನಿವಾರ ನಡೆದ ಫೈನಲ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುತಂದಿದ್ದಾರೆ.
ಪಳ್ಳಿಕಲ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರನ್ನು ಪ್ರೀತಿಸಿ 2015ರಲ್ಲಿ ಮದುವೆಯಾದರು. dipika-pallikal-saurav-duo-wins-indias-first-gold-medal