ಕೋಲಾರ: ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾಲೂರು ತಾಲೂಕಿನ ಭುವನಹಳ್ಳಿ ಗೇಟ್ ಹತ್ತಿರ ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಮಾಲೂರು ತಾಲೂಕಿನ ಮಿಟ್ಟಗಾನಹಳ್ಳಿ ನಿವಾಸಿಗಳಾದ ಸಂತೋಷ್ ಹಾಗೂ ಸುಮನ್ ಸಾವನ್ನಪ್ಪಿದ್ದಾರೆ.
ಮೃತರು ಆಲ್ ಕಾರ್ಗೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಟಿಪ್ಪರ್ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.