D K Sivakumar | ರಾಜಕೀಯವನ್ನು ರಾಜಕೀಯ ಮೈದಾನದಲ್ಲಿಯೇ ಮಾಡಬೇಕು
ನವದೆಹಲಿ : ರಾಜಕೀಯವನ್ನು ರಾಜಕೀಯ ಮೈದಾನದಲ್ಲಿಯೇ ಮಾಡಬೇಕು.
ಸರ್ಕಾರಿ ಏಜೆನ್ಸಿಗಳ ಕಚೇರಿ ಮೂಲಕ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ಕಾಂಗ್ರೆಸ್ ನಾಯಕರನ್ನು ಇಡಿ ವಿಚಾರಣೆ ನಡೆಸುತ್ತಿದೆ.
ಇದರ ಭಾಗವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಡಿ.ಕೆ.ಸಹೋದರರು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

ನಾಲ್ಕು ಗಂಟೆಗಳ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ವಿಚಾರಣೆ ವೇಳೆ ಏನು ಕೇಳಿದ್ರು ಅಂತಾ ಹೇಳಲು ಸಾಧ್ಯವಿಲ್ಲ.
ಕೆಲವು ದಾಖಲೆಗಣ್ನು ಸಲ್ಲಿಸಿದ್ದೇನೆ, ಇನ್ನೂ ಕೆಲವು ದಾಖಲೆಗಣ್ನು ನೀಡುತ್ತೇವೆ ಎಂದು ತಿಳಿಸಿದ್ದೇನೆ.
ಆನ್ ಲೈನ್ ಮೂಲಕ ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಡಿ.ಕೆ.ಶಿವಕುಮಾರ್, ರಾಜಕೀಯವನ್ನು ರಾಜಕೀಯ ಮೈದಾನದಲ್ಲಿಯೇ ಮಾಡಬೇಕು.
ಸರ್ಕಾರಿ ಏಜೆನ್ಸಿಗಳ ಕಚೇರಿಗಳ ಮೂಲಕ ಮಾಡಬಾರದು ಎಂದು ಗರಂ ಆದರು.