ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಜೈಲಿಗೆ ಹೋಗುವ ಭಯ ಶುರುವಾಗಿದೆ. ಹೀಗಾಗಿ ಸರ್ಕಾರವು ಸಿಬಿಐ (CBI) ಕೇಸ್ ಹಿಂಪಡೆದಿದೆದ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳೋಕೆ ಕೇಸ್ ವಾಪಸ್ ಪಡೆಯಲಾಗಿದೆ. ಈಗಾಗಲೇ ಸಿಬಿಐ ವಿಚಾರಣೆ ಬಹುತೇಕ ಮುಗಿಸಿದೆ. ಈ ಸಂದರ್ಭದಲ್ಲಿ ಕೇಸ್ ಹಿಂಪಡೆದಿದ್ದು ಏಕೆ ಎಂದು ಪ್ರಶ್ನಿಸಿ, ವಾಗ್ದಾಳಿ ನಡೆಸಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಕ್ಕಿ ಹಾಕಿಕೊಳ್ಳುವ ಕಾಲ ಬಂದಿದೆ. ತಪ್ಪಿಸಿಕೊಳ್ಳುವುದಕ್ಕಾಗಿ ಕೇಸ್ ವಾಪಸ್ ಪಡೆದಿದ್ದಾರೆ. ಈ ಸರ್ಕಾರದಲ್ಲಿ ಇರುವವರೆಲ್ಲ ಸ್ಕ್ಯಾಂಡಲ್‌ನಲ್ಲಿ ಇರೋರೆ. ಒಂದಿಲ್ಲೊಂದು ಹಗರಣದಲ್ಲಿ ಇದ್ದಾರೆ. ಶಿಕ್ಷೆ ಆಗುವ ಭಯ ಅವರಿಗಿದೆ ಎಂದು ಹೇಳಿದ್ದಾರೆ.