ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಭಾನುವಾರ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಬೈಕ್‌ನಲ್ಲಿ ನಗರ ಸಂಚಾರ ನಡೆಸಿದರು. ಅವರು ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿಯವರೆಗೆ ಬೈಕ್ ಓಡಿಸಿಕೊಂಡು ಹೋಗಿದ್ದು, ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದರು.
ರಸ್ತೆಯ ಗುಂಡಿಗಳ ಬಗ್ಗೆ ಸಚಿವರ ಟ್ವೀಟ್
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಬರೆದುಕೊಂಡಿರುವ ಡಿಕೆ ಶಿವಕುಮಾರ್, ಇದು ಕೇವಲ ಬೈಕ್ ಸವಾರಿಯಲ್ಲ. ಬೆಂಗಳೂರು ನಾಗರಿಕರು ಪ್ರತಿದಿನ ಎದುರಿಸುತ್ತಿರುವ ರಸ್ತೆಯ ಗುಂಡಿಗಳಂತಹ ಸಮಸ್ಯೆಗಳನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿತು ಎಂದಿದ್ದಾರೆ.
‘ನಾನು ಅಲ್ಲಿಯೇ ಇದ್ದೆ, ಕೇಳುತ್ತಿದ್ದೆ, ನೋಡುತ್ತಿದ್ದೆ ಮತ್ತು ಉತ್ತಮ ಬೆಂಗಳೂರನ್ನು ನಿರ್ಮಿಸಲು ಬದ್ಧನಾಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಈ ಬೈಕ್ ಸವಾರಿಯು ಯೌವ್ವನದ ದಿನಗಳನ್ನು ನೆನಪಿಸಿಕೊಂಡಂತೆಯೂ ಆಗಿತ್ತು. ಇದು ಬೆಂಗಳೂರಿನ ಸಮಸ್ಯೆಗಳನ್ನು ಹತ್ತಿರದಿಂದ ಅರಿಯಲು ಸಹಾಯಕವಾಗಿದ್ದು, ಸಾರ್ವಜನಿಕರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.






