ಬೆಂಗಳೂರು: ಡಿಕೆಶಿ ರಾಜಕೀಯವಾಗಿ ನನಗೆ ವಿಷ ಹಾಕಿದ್ದಾರೆ. ಆದರೂ ಮುಗಿಸಲು ಆಗಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಡಿಕೆಶಿ ವಿರುದ್ಧ ಆರೋಪ ಮಾಡಿದ್ದಾರೆ.
ದೇವೇಗೌಡರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನ ನಿಮ್ಮನ್ನ ತಿರಸ್ಕರಿಸಿದಾಗ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ಆದರೆ, ನಮ್ಮನ್ನೇ ಬಿಟಿಂ ಎಂದು ಕರೆಯುತ್ತಾರೆ. ಇವರೊಂದಿಗೆ ಹೊಂದಾಣಿಕೆಯಾದರೆ ನಮ್ಮ ಪಕ್ಷವನ್ನೇ ನಾಶ ಮಾಡಲು ಮುಂದಾದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊರಗಡೆ ನಮ್ಮನ್ನ ಉಳಿಸೋ ತರ ನಾಟಕ ಮಾಡ್ತೀರಿ. ಟ್ರಬಲ್ ಶೂಟರ್ ಅಂತ ದುಡ್ಡು ಕೊಟ್ಟು ಕರೆಸಿಕೊಂಡ್ರಿ. ನಮ್ಮ ಪಕ್ಷವನ್ನ ನಿರ್ಣಾಮ ಮಾಡಲು ಹೊರಟಿದ್ರಿ ಎಂದು ಗುಡುಗಿದ್ದಾರೆ.