ನಿನ್ನೆ ವಾಟ್ಸಾಪ್ ನಲ್ಲಿ ಲಾಸ್ಟ್ ಸೀನ್, ಟೈಪಿಂಗ್, ಆನ್ ಲೈನ್ ಎಂಬ ಫೀಚರ್ ಗಳು ಕಾಣಿಸದೇ ಇದ್ದಿದ್ದಕ್ಕೆ ಈ ಆಪ್ ಬಳಕೆದಾರರು ತಲೆಗೆ ಹುಳ ಬಿಟ್ಟುಕೊಂಡಿದ್ದರು. ಅಯ್ಯೋ ನನ್ನ ವಾಟ್ಸಾಪ್ ಗೆ ಏನಾಯ್ತಪ್ಪ ಎಂದು ತಲೆ ಕೆಡಿಸಿಕೊಂಡಿದ್ದರು.
ಈ ಹಿಂದೆ ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ನಾವು ಚಾಟ್ ಮಾಡುವಾಗ ನಮ್ಮ ಜೊತೆ ಚಾಟ್ ಮಾಡುತ್ತಿರುವ ವ್ಯಕ್ತಿ ಆನ್ ಲೈನ್ ನಲ್ಲಿ ಇದ್ದಾರೋ ಇಲ್ಲವೋ ಎಂಬೋದು ಗೊತ್ತಾಗುತ್ತಿತ್ತು. ಜೊತೆಗೆ ಮೇಸೇಜ್ ಟೈಪ್ ಮಾಡುವಾಗಿ ಟೈಪಿಂಗ್ ಅಂತ ತೋರಿಸುತ್ತಿತ್ತು. ಹಾಗೇ ಲಾಸ್ಟ್ ಸೀನ್ ಕೂಡ ಕಾಣಿಸುತ್ತಿತ್ತು. ಆದ್ರೆ ನಿನ್ನೆ ಈ ಫೀಚರ್ ಗಳು ವಾಟ್ಸಾಪ್ ಬಳಕೆದಾರರಿಗೆ ಗೋಚರವಾಗುತ್ತಿರಲಿಲ್ಲ. ಇದರಿಂದಾಗಿ ಆಪ್ ಬಳಕೆದಾರರು ಗೊಂದಲಕ್ಕೆ ಈಡಾಗಿದ್ದರು.
ಇದೀಗ ಈ ಮೂರು ಫೀಚರ್ ಗಳು ಕಾಣಿಸಿಕೊಳ್ಳದೇ ಇದ್ದಿದ್ದಕ್ಕೆ ಉತ್ತರ ಸಿಕ್ಕಿದ್ದು, ವಾಟ್ಸಾಪ್ ಸಂಸ್ಥೆ ತನ್ನ ಪ್ರೈವೇಸಿ ಸೆಟ್ಟಿಂಗ್ ನಲ್ಲಿ ಬದಲಾವಣೆ ಮಾಡಿದೆ. ಇದೇ ಕಾರಣಕ್ಕೆ ಈ ಹಿಂದೆ ಲಭ್ಯವಿದ್ದ ಫೀಚರ್ ಗಳು ಸಿಗುವುದಿಲ್ಲ ಅಂತಾ ಹೇಳಲಾಗಿದೆ. ಹಿಂದಿನ ಆಯ್ಕೆಗಳನ್ನ ಮತ್ತೆ ಬಳಸಲು ಸಾಧ್ಯವಿಲ್ಲ ಎಂಬುದೂ ತಿಳಿದುಬಂದಿದೆ.
ಆದ್ರೆ, ತನ್ನ ಪ್ರೈವೇಸಿ ಸೆಟ್ಟಿಂಗ್ ನಲ್ಲಿ ಬದಲಾವಣೆ ಮಾಡಿರುವ ಬಗ್ಗೆ ವಾಟ್ಸಾಪ್ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.