ಚಂಡೀಗಢ: ಹೆರಿಗೆಗೆಂದು ಆಸ್ಪತ್ರೆಗೆ ಬಂದ ಮಹಿಳೆ ಹಾಗೂ ಸಂಬಂಧಿಕರು ಎಷ್ಟೇ ಕೂಗಿದರು ಆಸ್ಪತ್ರೆಯಿಂದ ಹೊರಗೆ ಸಿಬ್ಬಂದಿ ಬಾರದ ಹಿನ್ನೆಲೆಯಲ್ಲಿ ಗರ್ಭಿಣಿಯು ತಳ್ಳುವಗಾಡಿಯಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಹರಿಯಾಣದ ಅಂಬಾಲಾದ ಸರ್ಕಾರಿ ಆಸ್ಪತ್ರೆ (Haryana Hospital) ಆವರಣದಲ್ಲಿಯೇ ಈ ಘಟನೆ ನಡೆದಿದೆ. ತುಂಬಾ ಚಳಿ ಇದೆ. ನೋವಿನಿಂದ ಗರ್ಭಿಣಿ ಒದ್ದಾಡುತ್ತಿದ್ದಾಳೆ ಎಂದು ಕುಟುಂಬಸ್ಥರು ಎಷ್ಟೇ ಬೇಡಿಕೊಂಡರೂ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಹೊರಗೆ ಬಂದಿಲ್ಲ. ಈ ಸಂದರ್ಭದಲ್ಲಿ ಹೆರಿಗೆ ನೋವು ತಾಳಲಾರದೆ ಮಹಿಳೆ ತರಕಾರಿ ಮಾರುವ ತಳ್ಳುಗಾಡಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತ ಮಹಿಳೆ ಪಂಜಾಬ್ನ ಮೊಹಾಲಿ ಜಿಲ್ಲೆಯ ದಪ್ಪರ್ನ ನಿವಾಸಿ ಎನ್ನಲಾಗಿದ್ದು, ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ, ವೈದ್ಯರು ಮಾತ್ರ ಎಷ್ಟೇ ಬೇಡಿಕೊಂಡರು ಬರಲಿಲ್ಲ. ಹೀಗಾಗಿ ತಳ್ಳುಗಾಡಿಯಲ್ಲಿಯೇ ಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.
ನಂತರ ವೈದ್ಯರು ಪ್ರಾಣಾಪಾಯವಾಗಬಹುದು ಎಂದು ಹೆದರಿ, ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಎದು ತಿಳಿದು ಬಂದಿದೆ. ಆದರೆ, ಆರೋಗ್ಯ ಸಚಿವರಿಗೆ ವಿಷಯ ಗೊತ್ತಾಗಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.








