ADVERTISEMENT
Thursday, June 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶುಬ್ಮನ್ ಗಿಲ್ ಅವರನ್ನು ಆಟವಾಡಲು ಬಿಡಿ.. ಯಾರ ಜೊತೆಗೂ ಹೋಲಿಕೆ ಬೇಡ

admin by admin
December 30, 2020
in Newsbeat, Sports, ಕ್ರೀಡೆ
shubman gill team india saakshatv
Share on FacebookShare on TwitterShare on WhatsappShare on Telegram

ಶುಬ್ಮನ್ ಗಿಲ್ ಅವರನ್ನು ಆಟವಾಡಲು ಬಿಡಿ.. ಯಾರ ಜೊತೆಗೂ ಹೋಲಿಕೆ ಬೇಡ

shubman gill team india saakshatvಟೀಮ್ ಇಂಡಿಯಾದ ಯುವ ಪ್ರತಿಭೆ ಶುಬ್ಮನ್ ಗಿಲ್ ಅವರನ್ನು ಮಾಜಿ ಸ್ಟಾರ್ ಆಟಗಾರರ ಜೊತೆಗೂ ಹೋಲಿಕೆ ಮಾಡಬೇಡಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಚೊಚ್ಚಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 45 ರನ್ ದಾಖಲಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ ಅಜೇಯ 35 ರನ್ ಗಳಿಸಿ ಗಮನ ಸೆಳೆದಿದ್ದರು.
ಶುಬ್ಮನ್ ಗಿಲ್ ಅವರ ಬ್ಯಾಟಿಂಗ್ ಶೈಲಿ ಮತ್ತು ಕೌಶಲ್ಯವನ್ನು ಗಮನಿಸಿದ ಕ್ರಿಕೆಟ್ ಪ್ರೇಮಿಗಳು ಮಾಜಿ ಆಟಗಾರರ ಜೊತೆ ಹೋಲಿಕೆ ಮಾಡುತ್ತಿದ್ದರು.
ಇದನ್ನು ಗಮನಿಸಿರುವ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್ ಕಿವಿ ಮಾತೊಂದನ್ನು ಹೇಳಿದ್ದಾರೆ.
ಶುಬ್ಮನ್ ಗಿಲ್ ವಿಶೇಷ ಪ್ರತಿಭೆಯುಳ್ಳ ಆಟಗಾರ. ಆತನನ್ನು ತನ್ನ ಪಾಡಿಗೆ ಆಟವಾಡಲು ಬಿಡೋಣ. ಆತನ ಕ್ರಿಕೆಟ್ ಜೀವನ ಉತ್ತುಂಗಕ್ಕೇರಲಿ. ಹೀಗಾಗಿ ಆತನನ್ನು ಯಾರ ಜೊತೆಗೂ ಹೋಲಿಕೆ ಮಾಡೋದು ಬೇಡ. ಆತನ ಮೇಲೆ ಒತ್ತಡ ಹೇರುವೂದು ಬೇಡ. ಆತ ಮುಂದೆ ಯಾರ ಉತ್ತರಾಧಿಕಾರಿಯೂ ಅಲ್ಲ. ಆತ ಮೊದಲು ಶುಬ್ಮನ್ ಗಿಲ್. ಇದೇ ರೀತಿ ಯುವ ಪ್ರತಿಭೆಗಳನ್ನು ಮಹಾನ್ ಕ್ರಿಕೆಟ್ ಆಟಗಾರರ ಜೊತೆ ಹೋಲಿಕೆ ಮಾಡಿ, ನಂತರ ಅವರು ಒತ್ತಡಕ್ಕೆ ಸಿಲುಕಿ ಅವರ ಪ್ರತಿಭೆ ಕಮರಿ ಹೋಗಿದೆ. ಯಾಕಂದ್ರೆ ಮಾಜಿ ಆಟಗಾರರ ಜೊತೆ ಹೋಲಿಕೆ ಮಾಡಿ ಅವರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದೇ ಇದ್ದಾಗ shubman gill team india saakshatvಅವರು ಒತ್ತಡಕ್ಕೆ ಸಿಲುಕಿದ್ದಾರೆ. ಶುಬ್ಮನ್ ಗಿಲ್ ಹಾಗೇ ಆಗೋದು ಬೇಡ ಎಂದು ವಾಸೀಮ್ ಜಾಫರ್ ಹೇಳಿದ್ದಾರೆ.
ಈಗಾಗಲೇ ಪೃಥ್ವಿ ಶಾ, ರಿಷಬ್ ಪಂತ್, ಮಯಾಂಕ್ ಅಗರ್ ವಾಲ್ ಸೇರಿದಂತೆ ಅನೇಕ ಯುವ ಕ್ರಿಕೆಟಿಗರನ್ನು ಮಾಜಿ ಆಟಗಾರರ ಜೊತೆ ಹೋಲಿಕೆ ಮಾಡಲಾಗಿತ್ತು. ಇದೀಗ ಈ ಎಲ್ಲಾ ಆಟಗಾರರು ಒತ್ತಡಕ್ಕೆ ಸಿಲುಕಿ ಆಡಡಬೇಕಾದಂತ ಪರಿಸ್ಥಿತಿ ಇದೆ.
ಒಟ್ಟಿನಲ್ಲಿ ಯುವ ಕ್ರಿಕೆಟಿಗರು ಸ್ಟಾರ್ ಆಟಗಾರರ ಜೊತೆಗೆ ಹೋಲಿಕೆ ಮಾಡುವಾಗ ಪ್ರಬುದ್ಧತೆಯನ್ನು ಪಡೆದುಕೊಳ್ಳಬೇಕು. ಆ ಹೋಲಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ತಮ್ಮ ಆಟವನ್ನು ಆಡಬೇಕಾಗಿದೆ. ಇಲ್ಲದೆ ಇದ್ರೆ ನಿರೀಕ್ಷೆಗಳು ಜಾಸ್ತಿಯಾದಾಗ ಅದಕ್ಕೆ ತಕ್ಕಂತೆ ಆಡದೇ ಇದ್ದಾಗ ಒತ್ತಡಕ್ಕೆ ಸಿಲುಕುತ್ತಾರೆ. ಅಷ್ಟೇ ಅಲ್ಲ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಯುವ ಕ್ರಿಕೆಟಿಗರು ಪ್ರತಿ ಪಂದ್ಯದಲ್ಲೂ ಕಲಿಯುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಬದ್ಧತೆಯನ್ನೂ ಮೈಗೂಡಿಸಿಕೊಳ್ಳಬೇಕು.

Related posts

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

June 11, 2026
ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

June 11, 2026
Tags: #pruthivi sha#rishab pant#saakshatvAjinkya RahaneaustreliaMayank AgarwalShubman Gillteam indiavirat kohliwasin jafar
ShareTweetSendShare
Join us on:

Related Posts

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

by Shwetha
June 11, 2026
0

ಮಾಜಿ ಪ್ರಧಾನಿ H. D. ದೇವೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗದ ವಿಚಾರವಾಗಿ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿರುವ ಕಾಳಜಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ B. Y. ವಿಜಯೇಂದ್ರ ತೀವ್ರವಾಗಿ...

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

by Shwetha
June 11, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 13ರಿಂದ 18ರವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿದ್ದು, ಪ್ರಮುಖ ರಾಷ್ಟ್ರಗಳಾದ ಫ್ರಾನ್ಸ್ ಹಾಗೂ ಸ್ಲೋವಾಕಿಯಾ ಗೆ ಭೇಟಿ ನೀಡಲಿದ್ದಾರೆ. ಭಾರತದ ಜಾಗತಿಕ...

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

by Shwetha
June 11, 2026
0

ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಬೃಹತ್ ಸಂಚಲನವೊಂದು ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಶ್ಚಿಮ ಬಂಗಾಳದ ಅಧಿಪತಿ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಶೀಘ್ರದಲ್ಲೇ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿಯರು ಯೋಜನೆಯಿಂದ ಹೊರಕ್ಕೆ; ಸಾವಿರಾರು ಅನರ್ಹರ ಹೆಸರು ಕೈಬಿಟ್ಟ ಸರ್ಕಾರ

by Shwetha
June 11, 2026
0

ರಾಜ್ಯದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಾವಿರಾರು ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ...

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ:  ಪ್ರಿಯಾಂಕ್ ಖರ್ಗೆ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

by Shwetha
June 11, 2026
0

ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಬಿಜೆಪಿ ಮುಖಂಡರು, ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಮೋದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram